ಮಳೆ ಹಾನಿ: ಪರಿಶೀಲನೆ


ಮುದಗಲ್.ನ.೦೨- ಪಟ್ಟಣ ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯಯಲ್ಲಿ ಮಹಾಮಳೆಗೆ ಹಾನಿಯದ ಮನೆ, ಶೆಡ್ಡುಗಳನ್ನು ಪಂಚಾಯತಿ, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಇತ್ತಿಚೇಗೆ ಗ್ರಾಪಂ ವ್ಯಾಪ್ತಿಯಲ್ಲಿನ ಯರದೊಡ್ಡಿ, ಹಡಗಲಿ ತಾಂಡಾ, ಸೊಂಪೂರ ತಾಂಡಾ, ವೆಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ ಹಾಗೂ ದೆಸಾಯಿ ಭೋಗಾಪೂರ ಸೇರಿದಂತೆ ಹಲವಡೆ ಮಳೆಗೆ ಹಾನಿಯಾಗಿದ್ದ ಮನೆ, ಶೆಡ್ಡುಗಳನ್ನು ಪರಿಶೀಲಿಸಿ ಕಡತದಲ್ಲಿ ದಾಖಳಿಸಿಕೊಂಡರು. ಕೊರೊನಾ ದಿಂದ ಕೆಸಲ ಕಳೆದುಕೊಂಡು ಮನೆಸೇರಿದ ಕೂಲಿಕಾರ್ಮಿಕರಿಗೆ ಈಗ ನೆರೆಹಾನಿ ಅಪಾರಪ್ರಮಾಣದಲ್ಲಿ ಬೆಳೆ, ಮನೆ ಹಾನಿಮಾಡಿದೆ. ಸರಕಾರ ಬಿದ್ದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕಿದೆಎಂದು ಇಲ್ಲಿನ ಜನರು ಅಧಿಕಾರಿಗಳಿಗೆ ಮನವಿಮಾಡಿಕೊಂಡರು.
ಬೆಳೆ ಹಾನಿ: ಇಲ್ಲಿನ ಸಾವಿರಾರು ಎಕರೆಯಲ್ಲಿ ಬೆಳೆದ ಈರುಳ್ಳಿ, ತೋಗರಿ, ಹತ್ತಿ, ಮೆಣಸಿಕಾಯಿ ಹಾಗೂ ಸಜ್ಜೆ ಬೆಳೆ ಹಾನಿಯಾಗಿದೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯನ್ನು ಆಯಾ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು.