ಮಳೆ ಹಾನಿಯಾದ ಸಮೀಕ್ಷೆಗೆ ನೈಜ ವರದಿಗೆ ಆಗ್ರಹ-ಹುಸೇನಪ್ಪ ಕಳ್ಳಿ

ಲಿಂಗಸೂಗೂರು.ನ೨೨- ತಾಲೂಕಿನ ಮಾವಿನಭಾವಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸತತ ಮಳೆಗೆ ಹಾನಿಯಾದ ಜಂಟಿ ಸಮೀಕ್ಷೆ ವರದಿ ಭೌತಿಕವಾಗಿ ಸ್ಥಳ ಪರೀಶಿಲಿಸದೆ ಹಾಗೂ ವರದಿ ಸಲ್ಲಿಸದ ವಿಫಲರಾದ ಸಂಭಂದಿಸಿದ ನೌಕರರನ್ನು ತನಿಖೆಗೆ ಒಳಪಡಿಸಿ ನಿಯಮನುಸಾರ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ತಹಶೀಲ್ದಾರ ಲಿಂಗಸುಗೂರು ರವರು ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಕಿರಿಯ ಅಭೀಯಂತರರು ಪಿ.ಎಮ್.ಜಿ.ಎಸ್.ವಾಯ್ ರವರುಗಳಿಗೆ ಆದೇಶ ಮಾಡಿದರು. ಮಳೆಯಿಂದ ಮನೆ ಹಾನಿಯಾದ ಗ್ರಾಪಂ ಮಾವಿನಭಾವಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗಳಲ್ಲಿ ಸುಮಾರು ೨೦-೨೫ ಮನೆಗಳು ಹಾನಿಯಾದರೂ ಸಹ ಭೇಟಿ ನೀಡದೆ ಭೌತಿಕ ಸ್ಥಳ: ಪರಿಶೀಲಿಸದೆ ಹಾನಿಯಾದ ಮನೆಗಳಿಗೆ ಜಿಪಿಎಸ್ ಪೋಟೋ (ಭಾವಚಿತ್ರ) ಸಮೇತ ವರದಿ ಸಲ್ಲಿಸದೆ ತಮ್ಮ ಮನಸ್ಸು ಇಚ್ಚೆಯಂತೆ ಅಸಮರ್ಪಕ ವರದಿ ಸಲ್ಲಿಸಿ, ಸದರಿ ನೌಕರರು ಅಧಿಕಾರ ದುರಪಯೋಗ ಹಾಗೂ ಕರ್ತವ್ಯಲೋಪ ವೆಸಗಿರುತ್ತಾರೆ. ಸಂಪೂರ್ಣವಾಗಿ ಸೇವಾ ನಿಯಮಗಳನ್ನು ಉಲ್ಲಂಘಿಸಿರುತ್ತಾರೆ, ಹಾಗೂ ವಿಪತ್ತು ನಿರ್ವಹಣ ಕಾಯಿದೆ ೨೦೦೫ ನ್ನು ಉಲ್ಲಂಘಿಸಿರುತ್ತಾರೆ. ಸದರಿ ನೌಕರರು ಕರ್ತವ್ಯಲೋಪದಿಂದ ಮನೆ ಹಾನಿಯಾದ ಬಡ ಕುಟುಂಬಗಳಿಗೆ ತೀವ್ರತರಹವಾದ ಆರ್ಥಿಕ ನಷ್ಟದಿಂದ ಬಳಲುತ್ತಿದ್ದಾರೆ. ಸದರಿ ನೌಕರರು ತಹಶೀಲ್ದಾರರ ಆದೇಶವನ್ನು ಪಾಲನೆ ಮಾಡಿರುವದಿಲ್ಲ. ಇದರಿಂದ ಹಾನಿಯಾದ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಹಾನಿಗೊಳಗಾದ ಮನೆಗಳ ವಸ್ತು ಸ್ಥಿತಿ ವರದಿ ತರಸಿಕೊಂಡು ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿ ತಪ್ಪಿಸ್ಥಿತ ನೌಕರರು ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಹುಸೇನಪ್ಪ ಕಳ್ಳಿಲಿಂಗಸಗೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .