ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕರ ಭೇಟಿ

ಸಂಜೆವಾಣಿ ವಾರ್ತೆ

 ಹರಿಹರ ಜು 27;  ಬಿಡುವಿಲ್ಲದೆ ಸುರಿಯುತ್ತಿರುವ  ಮಹಾಮಳೆಗೆ  ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ಕುಸಿದು ಬಿದ್ದು ಬೆಳೆಹಾನಿ ಉಂಟಾಗಿದ್ದು  ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಕೂಡಲೇ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕೆಂದು ಶಾಸಕ ಬಿಪಿ ಹರೀಶ್ ಹೇಳಿದರು.ವರುಣನ ಆರ್ಭಟಕ್ಕೆ  ಚರಂಡಿ ಹಳ್ಳಕೊಳ್ಳ ತುಂಬಿಕೊಂಡು ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತದೆ ತಗ್ಗು ಪ್ರದೇಶದಲ್ಲಿರುವಂತ ನಾಗರೀಕರು ರೈತರು ನದಿ ತೀರಕ್ಕೆ ಜನಜಾನುವಾರುಗಳನ್ನು ಬಿಡದಂತೆ ಜಾಗೃತರಾಗಬೇಕು ಕೆಂಚನಹಳ್ಳಿ. ಮೇಲೆಬೆನ್ನೂರು.  ಎಳೆ ಹೊಳೆ,. ಬನ್ನಿ ಕೋಡು ಭಾನುವಳ್ಳಿ. ರಾಜನಹಳ್ಳಿ. ವಾಸನ. ಉಕ್ಕಡಗಾತ್ರಿ. ಸೇರಿದಂತೆ  ಸಾಕಷ್ಟು ಮನೆಗಳು ಕುಸಿದು ಬೆಳೆ ಹಾನಿ ಸಾವು ಕೂಡ ಸಂಭವಿಸಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದರು.ತಮ್ಮ ವಾಹನದಲ್ಲಿ ಶಾಸಕ  ಬಿಪಿ ಹರೀಶ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಇಕ್ಕಟ್ಟಿನ ಪ್ರದೇಶಗಳಲ್ಲಿ ತಮ್ಮ ವಾಹನ ಹೋಗದ ಕಾರಣ ದ್ವಿಚಕ್ರ ವಾಹನೊಂದಿಗೆ ಸಂಚರಿಸಿ ಮನೆಯ ಕುಸಿದು ಬಿದ್ದು ಮತ್ತು ಮೃತಪಟ್ಟ ಕುಟುಂಬದ ಮನೆಗಳಿಗೆ ತೆರಳಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.ಕೂಡಲೇ  ಮನೆಯ ಕಳೆದುಕೊಂಡ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು  ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಕುಂಬಳೂರಿನಲ್ಲಿ ಕೆಂಚಪ್ಪನವರ ಪುತ್ರಿ ಒಂದು ವರ್ಷದ ಸ್ಪೂರ್ತಿ ಮೃತಪಟ್ಟಿದ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ದಡಿಯಲ್ಲಿ ಪರಿಹಾರವನ್ನು ನೀಡಲಾಗಿದೆ ಎಂದರು