ಮಳೆ : ಹಗರಿಬೊಮ್ಮಹಳ್ಳಿ ತಾಲೂಕಿನಲ್ಲಿ 17 ಮನೆಗಳಿಗೆ  ಹಾನಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.07 ತಾಲೂಕಿನ ಸುತ್ತಮುತ್ತ ಸೋಮವಾರ ಮತ್ತು ಮಂಗಳವಾರ  ಸುರಿದ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಕಡಲಬಾಳು ಮಾಲವಿ, ಗಿರಿ ಗೊಂಡನಹಳ್ಳಿ ಮೋರಿಗೆರೆ ಹರೇಗೊಂಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ 17 ಮನೆಗಳು ಕುಸಿದು ಬಿದ್ದಿವೆ.
ಸ್ಥಳಕ್ಕೆ ತಹಸೀಲ್ದಾರ್ ವಿ. ಕಾರ್ತಿಕ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ್ದಾರೆ. ತಾಲೂಕಿನಲ್ಲಿ 17 ಮನೆಗಳು ಭಾಗಶಃ ಹಾನಿಯಾಗಿದ್ದು.ಅವರಿಗೆ ಆನ್ಲೈನ್ ಮೂಲಕ ಸೂಕ್ತ ಪರಿಹಾರ ಒದಗಿಸುವ ಲಾಗುವುದು ಎಂದರು.