ಮಳೆ ಸಮಸ್ಯೆ ಮೇಯರ್ ಜೊತೆ ಪರಿಶೀಲಿಸಿದ ಗ್ರಾಮೀಣ ಶಾಸಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.11: ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿದ  ಮಳೆಗೆ  ಗ್ರಾಮೀಣ ಕ್ಷೇತ್ರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬರುವ  30, 31 ಮತ್ತು 32ನೇ ವಾರ್ಡಿನ ತಗ್ಗು ಪ್ರದೇಶಗಳಲ್ಲಿನ‌ ಮನೆಗಳಿಗೆ ನೀರು ನುಗ್ಗಿ ಆಗಿರುವ ಸಮಸ್ಯೆಯನ್ನು ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು ಅವರೊಂದಿಗೆ ಶಾಸಕ ಬಿ.ನಾಗೇಂದ್ರ ನಿನ್ನೆ ತೆರಳಿ ಪರಿಶೀಲನೆ ನಡೆಸಿದರು. 
ಮಡಿಕೇರಿ ಬಡಾವಣೆಯ ಮನೆಗಳ ಒಳಗೆ ಚರಂಡಿಯ ನೀರು ನುಗ್ಗಿ ಭಾರಿ ಅವಾಂತರ ಸ್ವತ್ತುಗಳು ನೀರುಪಾಲಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಾಲಿಕೆ ಆಯುಕ್ತ ರುದ್ರೇಶ್, ಆಯಾ ವಾರ್ಡಿನ ಪಾಲಿಕೆ ಸದಸ್ಯರುಗಳು,  ಅಧಿಕಾರಿಗಳೊಂದಿಗೆ  ಪರಿಶೀಲನೆ ನಡೆಸಿದ ಶಾಸಕರು
ಮನೆಗಳಲ್ಲಿ ತುಂಬಿರುವ ನೀರನ್ನು ಮೋಟಾರ್‌ಗಳ ಸಹಾಯದಿಂದ ರಾಜಕಾಲುವಿಗೆ ಹರಿಸಲು ಸೂಚಿಸಿದರು.
ಹೊಸ  ಒಳಚರಂಡಿ ಪೈಪ್‌ಲೈನ್ ಕಾಮಗಾರಿ ನಿರ್ಮಾಣವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಜನರಿಗೆ ಭರವಶೆ ನೀಡಿದರು.
ಪಾಲಿಕೆ ಸದಸ್ಯೆ ಕೆ.ಮಂಜುಳ ಉಮಾಪತಿ, ಎಂ.ಡಿ ಆಸೀಫ್ ಭಾಷಾ,  ಶ್ವೇತಾ ಸೋಮು ಮೊದಲಾದವರು ಇದ್ದರು.