ಮಳೆ ಸಂತ್ರಸ್ತರಿಗೆ ಉಪಹಾರ-ಊಟದ ವ್ಯವಸ್ಥೆ

ರಾಯಚೂರು.ಸೆ.೦೮- ತಡರಾತ್ರಿ ಸುರಿದ ಮಳೆಯಿಂದ ತೊಂದರೆಗೊಳಗಾದ ವಿವಿಧ ಬಡಾವಣೆ ನಿವಾಸಿಗಳಿಗೆ ತಕ್ಷಣವೆ ಉಪಹಾರ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ನೀರು ನಿರ್ವಹಣೆಗೆ ಆದೇಶಿಸಲಾಗಿದೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಮುಂಜಾನೆ ಮಳೆಯಿಂದ ತೊಂದರೆಗೆ ಗುರಿಯಾದ ಬಡಾವಣೆಗಳಿಗೆ ಭೇಟಿ ನೀಡಿ, ಅಲ್ಲಿಯ ಜನರೊಂದಿಗೆ ಸಮಾಲೋಚಿಸಿದ ನಂತರ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಮಳೆಯಿಂದ ತೊಂದರೆಯಾದ ಕುಟುಂಬಗಳಿಗೆ ತಕ್ಷಣಕ್ಕೆ ಉಪಹಾರ ಮತ್ತು ಊಟದ ವ್ಯವಸ್ಥೆಗೆ ಆದೇಶಿಸಲಾಗಿದೆ. ರಾಜಕಾಲುವೆ ಮತ್ತು ಚರಂಡಿ ಸ್ವಚ್ಛತೆ ಹಿನ್ನೆಲೆಯಲ್ಲಿ ಮಳೆ ನೀರು ಕೇವಲ ೨ ಘಂಟೆಗಳಲ್ಲಿ ಸಂಪೂರ್ಣ ಇಳಿದು ಹೋಗಿತ್ತು. ರಾಜಕಾಲುವೆ ಸ್ವಚ್ಛತೆಗೆ ಒಂದಿಷ್ಟು ಬಾಕಿಯಿದ್ದು, ಮಳೆ ನಿಂತ ನಂತರ ಇದನ್ನು ಪೂರ್ಣಗೊಳಿಸಲಾಗುತ್ತದೆ. ಈ ಹಿಂದೆ ಮಳೆ ಬಂದಾಗ ಬಡಾವಣೆಗಳಲ್ಲಿ ನೀರು ನಿಲ್ಲುತ್ತಿತ್ತು. ಆದರೆ, ಕಾಲುವೆಗಳ ಸ್ವಚ್ಛತೆ ಹಿನ್ನೆಲೆಯಲ್ಲಿ ಮಳೆ ನೀರು ಹರಿದು ಹೋಗಲು ಅನುಕೂಲವಾಗಿದೆಂದರು. ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲಾ ಸೌಕರ್ಯ ಮಾಡಿಕೊಡಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆಯೂ ಆದೇಶಿಸಲಾಗಿದೆ.