ಮಳೆ ವರದಿ: ಚಿಕ್ಕಜಾಜೂರಿನಲ್ಲಿ 65.8 ಮಿ.ಮೀ ಮಳೆ

ಚಿತ್ರದುರ್ಗ,ಜೂ.6;
ಚಿತ್ರದುರ್ಗ ಜಿಲ್ಲೆಯಲ್ಲಿ ಜೂನ್ 05ರಂದು ಬಿದ್ದ ಮಳೆಯ ವಿವರದನ್ವಯ ಹೊಳಲ್ಕೆರೆ  ತಾಲ್ಲೂಕಿನ ಚಿಕ್ಕಜಾಜೂರುನಲ್ಲಿ 65.8 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 36.4, ರಾಮಗಿರಿ 8.4, ಬಿ.ದುರ್ಗ 16.2, ಹೆಚ್.ಡಿ.ಪುರ 7.2 ಹಾಗೂ ತಾಳ್ಯದಲ್ಲಿ 4.2 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 7.4, ಬಬ್ಬೂರು 7, ಇಕ್ಕನೂರು 33.2, ಈಶ್ವರಗೆರೆಯಲ್ಲಿ 6.4, ಸುಗೂರಿನಲ್ಲಿ 5.2 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 1 ಮಿ.ಮೀ, ಪರಶುರಾಂಪುರ 3, ಡಿ.ಮರಿಕುಂಟೆಯಲ್ಲಿ 2.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 3.8, ಬಾಗೂರು 6.3, ಮಾಡದಕರೆ 3, ಮತ್ತೋಡು 2.4, ಶ್ರೀರಾಂಪುರದಲ್ಲಿ 7.2 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 19 ಮಿ.ಮೀ, ಬಿ.ಜಿ.ಕೆರೆ 4, ರಾಯಾಪುರದಲ್ಲಿ 3.8 ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 25.2,  ಚಿತ್ರದುರ್ಗ-2ರಲ್ಲಿ 10.6, ಹಿರೇಗುಂಟನೂರು 2.3, ಭರಮಸಾಗರ 4.4, ಸಿರಿಗೆರೆ 38,  ಐನಹಳ್ಳಿ 7.4, ತುರುವನೂರಿನಲ್ಲಿ 19.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. Attachments area