ಮಳೆ ಬಿರುಗಾಳಿಗೆ ನೆಲಕಚ್ಚಿದ ಪಪ್ಪಾಯಿ

ಕವಿತಾಳ.ಜು.೨೯- ಸಮೀಪದ ಪಾಮನಕಲ್ಲೂರು ಗ್ರಾಮದ ಬಂದೇನವಾಜು ಲಾಲುಸಾಬ್ ಕಟಗರ್‌ರವರ ನಾಲ್ಕು ಎಕರೆ ೧೭೧ ಸರ್ವೆ ನಂಬರ್‌ನ ತೋಟದಲ್ಲಿನ ಪಪ್ಪಾ ಯಿ ಬೆಳೆಯು ರವಿವಾರ ಸುರಿದ ಮಳೆ ಭಾರಿ ಬಿರುಗಾಳಿಗೆ ನೆಲಕ್ಕುರುಳಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮುಂದೇನು ಮಾಡಬೇಕು ಎನ್ನುವದು ರೈತನ ಚಿಂತೆಯಾಗಿದೆ. ರೈತ ಬಂದೆನವಾಜು ಕಳೆದ ವರ್ಷದ ಹಿಂದೆ ಪಪ್ಪಾಯಿ ನಾಟಿ ಮಾಡಿದ್ದರು. ನಿನ್ನೆ ದಿನಾಂಕ ೫ರಂದು ವ್ಯಾಪಾರಸ್ಥರು ಪಪ್ಪಾಯಿ ಕೊಳ್ಳಲು ಬಂದಿದ್ದರು. ಇಂದು ದಿನಾಂಕ ೬ರಂದು ಪಪ್ಪಾಯಿ ಕೊಯ್ಲು ಮಾಡುವ ತಿರ್ಮಾನವನ್ನು ಕೈಗೊಳ್ಳಲಾಗಿತ್ತು.
ಆದರೆ ಸಂಜೆ ೭ ಗಂಟೆಗೆ ಮಳೆ ಬಂದು ವಿಪರಿತ ಗಾಳಿ ಬಿಟ್ಟು ನಾಲ್ಕು ಎಕರೆಯ ಪಪ್ಪಾಯಿ ಬೆಳೆಯು ಸಂಪೂರ್ಣವಾಗಿ ನೆಲಕ್ಕುರುಳಿದೆ ೨ ಲಕ್ಷಕ್ಕು ಹೆಚ್ಚು ಹಣ ಖರ್ಚುಮಾಡಿದ್ದು ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ರೈತ ಮನವಿಮಾಡಿದ್ದಾರೆ.
ಗಾಳಿಗೆ ಮರ ಉರುಳಿ ರಸ್ತೆ ಅಸ್ತವ್ಯಸ್ತ ರಾತ್ರಿ ೧೦ ಗಂಟೆಗೆ ಪಾಮನಕಲ್ಲೂರುನ ಮುಖ್ಯ ರಸ್ತೆಯಲ್ಲಿ ಬೃಹತ್ ಮರವೊಂದುರುಳಿ ವಾಹನಗಳು ಪರದಾಡು ವಂತಾಯಿತು. ಸಾರ್ವಜನಿಕರು ಪೊಲೀಸ್‌ರುಗೆ ಮಾಹಿತಿಯನ್ನು ನೀಡಲು ಪಿಎಸ್‌ಐ ವೆಂಕಟೇಶವರು ಜೆಸಿಬಿ ತರಸಿ ರಸ್ತೆಯಲ್ಲಿದ್ದ ಬಿದ್ದ ಮರವನ್ನು ತೆರವು ಗೊಳಿಸಿದರು. ನಂತರ ರಸ್ತೆ ಸಂಚಾರ ಸುಗಮವಾಗಿ ನಡೆಯಿತು. ವಟಗಲ್, ಕೊಟೆಕಲ್, ಹಣಗಿ ಸೇರಿದಂತೆ ಮರಗಳು ಉರುಳಿ ಬಿದ್ದ ಬಗ್ಗೆ ವರದಿಯಾಗಿವೆ.
ನಾನು ಸಾಲಮಾಡಿ ಪಪ್ಪಾಯಿ ಬೆಳೆಯನ್ನು ಬೆಳೆಸಲಾಗಿದ್ದು ನಿನ್ನೆಯ ದಿನ ವ್ಯಾಪಾರಸ್ಥರು ಬೆಳೆಯನ್ನು ರಿಯಾಯತಿ ಧರಕ್ಕೆ ಮುಗಿಸಿ ಕೊಯ್ಲು ಮಾಡುವರಿದ್ದರು ಅಂದಾಜು ೫ ಲಕ್ಷ ರೂಪಾಯಿ ಬೆಳೆಯು ಮಳೆಗೆ ನಷ್ಟವಾಗಿದೆ ಸರ್ಕಾರವು ನನಗೆ ಪರಿಹಾರವನ್ನು ನೀಡಬೇಕು-ಬಂದೆನವಾಜು ಪಪ್ಪಾಯಿ ಬೆಳೆದ ರೈತ ಪಾಮನಕಲ್ಲೂರು.