ಮಳೆ ಬಂದರೆ ನಮ್ ಗತಿ ನೋಡಿ ನಿಮ್ಮ ನೋವಿಗೆ ನಾವೀದ್ದೇವೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 06 : ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆ ಬಂದ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿಗೆ ಇಲ್ಲಿನ ಬೀಚಿ ನಗರದ ಜನತೆ. ನೋಡಿ ಮಳೆ ಬಂದರೆ ನಮ್ಮ‌ಪರಿಸ್ಥಿತಿ ಹೇಗಿದೆ. ಮಳೆ ನೀರೆಲ್ಲ ಮನೆ್ಎ ನುಗ್ಗುತ್ತಿದೆಂದು ತಮ್ಮ ಸಂಕಷ್ಟವನ್ನು ತೋಡಿಕೊಂಡರು.
ಸಮಸ್ಯೆ ಬಗ್ಗೆ ಸಮಗ್ರವಾಗಿ ಅರಿತುಕೊಂಡ ಪ್ರತಾಪ್ ರೆಡ್ಡಿ ಅವರು. ರಸ್ತೆ ಮತ್ತು ತೆರೆದ ಚರಂಡಿ ನಿರ್ಮಾಣದಲ್ಲಿ ಆಗಿರುವ ದೋಷವೇ ಕಾರಣ ಆಗಿದೆ. ಇದನ್ನು ಸರಿಪಡಿಸಲು ಪ್ರತ್ನಿಸಲಿದೆ. ನಿಮ್ಮ‌ನೋವಿಗೆ ನಾವು ಸ್ಪಂದಿಸುತ್ತೇವೆ.
ಉತ್ತಮ ರೀತಿಯ ಯೋಜನೆಗಳ ಮೂಲಕ ಸ್ವಚ್ಚ ಸುಂದರ ನಗರ ರೂಪಿಸಲು ಸಂಕಲ್ಪ‌ ಮಾಡಿರುವ  ಕಾಂಗ್ರೆಸ್ ಅಭ್ಯರ್ತಿಗೆ ಮತ‌ ನೀಡಿ ಎಂದು ಮನವಿ ಮಾಡಿದರು.
ನಿಮ್ಮ ಮೇಲಿನ ಭರವಶೆಯಿಂದ ಕಾಂಗ್ರೆಸ್ ಗೆ ಮತ ನೀಡಲಿದೆ. ಆಯ್ಕೆಯಾದ ಮೇಲೆ ನಮ್ಮ ಸಮಸ್ಯೆಗೆ ಪರಿಹಾರ ಮಾಡಲೇ ಬೇಕೆಂದು‌ ಸ್ಥಳೀಯರು ಮನವಿ ಮಾಡಿದರು.