ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಜು.9 :- ಮಳೆ ಹೆಚ್ಚಾಗಿ ರಸ್ತೆಯಲ್ಲಿ ನೀರು ನಿಂತು ಮನೆಯೊಳಗೆ ಬಂದಾಗ ಊರು ಸರಿ ಇಲ್ಲ, ಸರ್ಕಾರ ಸರಿ ಇಲ್ಲ ಎಂದು ಕಿರಿಚುವ ಮೊದಲು ಸರ್ಕಾರ ಮತ್ತು ಆಡಳಿತದ ಜೊತೆಗೆ ಜನರು ಕೂಡ ಸರಿ ಇಲ್ಲ ಅನ್ನೋದನ್ನು ಮೊದಲು ಸಾರ್ವಜನಿಕರು ಅರಿತುಕೊಳ್ಳಬೇಕು.ಹರಪನಹಳ್ಳಿ ಪಟ್ಟಣದಲ್ಲಿ ಕಳೆದು 3ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವದರಿಂದ ಪಟ್ಟಣದಲ್ಲಿನ ಎಲ್ಲಾ ಚರಂಡಿಗಳು ತುಂಬಿ ಹರಿಯುವ ಸಂದರ್ಭದಲ್ಲಿ ಸಾರ್ವಜನಿಕರು ಬಿಸಾಡಿದ ಕಸ ಕಡ್ಡಿ, ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಉತ್ಪನ್ನಗಳೇಗಳದ್ದೇ ಕಾರು ಬಾರು ಅದಕ್ಕೆ ನೇರ ಕಾರಣ.ಪುರಸಭೆ ಮಾಡಿದ ಅಥವಾ ಮಾಡಬೇಕಾದ ಒಳಚರಂಡಿ ವ್ಯವಸ್ಥೆ ಅಲ್ಪಸ್ವಲ್ಪ ಇರುವ ವ್ಯವಸ್ಥೆ ಕೆಟ್ಟು ಹೋಗಲು ವೈಜ್ಞಾನಿಕವಾಗಿ ಮಾಡದೆ ಇರಬಹುದು.ಸ್ಥಳೀಯ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡಿ ಹಣ ಮಾಡುವ ಕಂಪನಿಗಳು ಇಂದು ಅದೇ ಸಾರ್ವಜನಿಕರ ರಸ್ತೆ ಬೀದಿ ಬೀದಿಗಳಲ್ಲಿ ಹಳ್ಳಕೆರೆಗಳಲ್ಲಿ ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿಗೆ ಮಾರಕವಾಗುತ್ತಿದೆ. ಇದರಿಂದ ಸಾಮಾಜಿಕ ಪ್ರಜ್ಞೆ ಇಲ್ಲದಂತಾಗಿದೆ ಅದನ್ನು ಕುಡಿದು ಮನಸೋ ಇಚ್ಛೆ ಎಲ್ಲೆಂದರಲ್ಲಿ ಬಿಸಾಡುವ ಜನರಿಗೆ ಅದಕ್ಕಿಂತ ಮೊದಲು ಪರಿಸರದ ಬಗ್ಗೆ ಕಾಳಜಿ ಇಲ್ಲವೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.ಎಲ್ಲೇ ನೋಡಿದರೂ ನಮಗೆ ಸಿಗೋದು ಕುಡಿದು ಬಿಸಾಡಿದ ರಾಶಿ ರಾಶಿ ನೀರು ಬಾಟಲಿಗಳು, ಪಾನ್ ಪರಾಗ್, ಗುಟ್ಕಾ, ಇನ್ನಿತರ ವಸ್ತುಗಳ ಪ್ಲಾಸ್ಟಿಕ್ ವೇಸ್ಟ್ ಗಳು,ಅದರೊಂದಿಗೆ ಮದ್ಯ ಪಾನ ಮಾಡಿ ಎಸೆದ ಬಾಟಲ್ ಗಳು ಹೀಗೆ ಅನೇಕ ರೀತಿಯ ಅನಾರೋಗ್ಯ ಸೇರಿದಂತೆ ದೈಹಿಕ, ಮಾನಸಿಕ, ಸಾಮಾಜಿಕ ಈ ಎಲ್ಲಾ ಸಮಸ್ಯೆಗಳಿಗೆ ನಾವು, ನಮ್ಮ ನಡವಳಿಕೆಗಳು ನಾವೇ ಕಾರಣ ಎನ್ನುವ ಸಣ್ಣ ಪ್ರಜ್ಞೆ ಸಹಾ ನಮ್ಮಗಳಲ್ಲಿ ಇಲ್ಲವಾಗಿದೆ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ತಾನೇ ನಮಗೂ, ನಮ್ಮ ಮಕ್ಕಳಿಗೂ ಮುಂದಿನ ಭವಿಷ್ಯ ಇರೋದು.ಬೇರೆ ಬೇರೆ ಮುಂದುವರಿದ ದೇಶಗಳ ಬಗ್ಗೆ, ಅಲ್ಲಿಯ ಶಿಸ್ತು, ಕಾನೂನು ಪಾಲನೆ, ಸುಂದರತೆ ಬಗ್ಗೆ ಹೊಗಳುವ ನಾವು, ಅಲ್ಲಿನ ಜನರಂತೆ ನಾವುಗಳು ಕೂಡ ಕಡಿಮೆ ಇಲ್ಲ ಅನ್ನೋದನ್ನು ಮೊದಲು ತಿಳಿಯಬೇಕು. ಬದಲಾಗೋದು, ಸುಧಾರಿಸೋದು ಯಾವಾಗ ಎಂದು ಸಾರ್ವಜನಿಕರು ಆರೋಪಿಸಿದರು.