ಮಳೆ, ಪ್ರವಾಹ ಸಂಬಂಧಿ ಪರಿಹಾರ ಸಮರೋಪಾದಿಯಲ್ಲಿ ನಿರ್ವಹಿಸಿ: ಸೂಚನೆ

ಚಾಮರಾಜನಗರ, ಸೆ.03:- ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿರುವತೊಂದರೆಗಳಿಗೆ ಪರಿಹಾರ ಕ್ರಮಗಳು ಹಾಗೂ ಪುನರ್ವಸತಿ ಕಾರ್ಯವನ್ನು ಸಮರೋಪಾದಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕೆಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚಿಸಿದರು.
ನಗರದಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಳೆಹಾನಿ ಹಾಗೂ ಪ್ರವಾಹದಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಪ್ರವಾಹ, ಪ್ರಕೃತಿ ವಿಕೋಪಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಬೆಳೆ, ಮನೆಗಳಿಗೆ ಹಾನಿಯಾಗಿದೆ. ಶಾಲೆ, ರಸ್ತೆ ಸೇರಿದಂತೆ ಇತರೆ ಮೂಲ ಸೌಕರ್ಯಗಳಿಗೂ ಧಕ್ಕೆಯಾಗಿದೆ. ನಷ್ಟದ ಕುರಿತು ವ್ಯಾಪಕವಾಗಿ ಸಮೀಕ್ಷೆ ಕೈಗೊಂಡು ನಿಖರ ಅಂಕಿ ಅಂಶಗಳನ್ನು ಒದಗಿಸಬೇಕು. ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಪ್ರವಾಹ ಮಳೆಯಿಂದ ನಷ್ಟ ಸಂಭವಿಸಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರ ಒದಗಿಸುವಾಗ ಮಾನವೀಯ ನೆಲೆಯಲ್ಲಿ ನೋಡಬೇಕು. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಆಯಾ ಭಾಗದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಹೆಚ್ಚು ಮಾಹಿತಿಇರುತ್ತದೆ. ಹೀಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ಸಮನ್ವಯದಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ಖುದ್ದು ಪರಿಶೀಲಿಸಿ ಅರ್ಹರೆಲ್ಲರಿಗೂ ಪರಿಹಾರ ತಲುಪಿಸಬೇಕು ಎಂದು ಸಚಿವರು ತಿಳಿಸಿದರು.
ಕೆರೆ-ಕಟ್ಟೆಗಳನ್ನು ಸುಸ್ಥಿತಿಯಲ್ಲಿಟ್ಟು ಕೊಂಡು ಸಂರಕ್ಷಣೆ ಮಾಡಬೇಕು. ರಾಜಕಾಲುವೆಗಳು ಸೇರಿದಂತೆ ಎಲ್ಲಾ ಕಾಲುವೆಗಳನ್ನು ಸ್ವಚ್ಚಗೊಳಿಸಬೇಕು. ಕಾಮಗಾರಿಗಳು ಬಾಕಿ ಉಳಿಯದಂತೆ ಪೂರ್ಣಗೊಳಿಸಬೇಕು. ಕೆರೆಗಳಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ತೆಗೆಯಬೇಕು. ಕೆರೆಗಳು ಒತ್ತುವರಿಯಾಗಿದ್ದಲ್ಲಿ ಪೊಲೀಸರ ನೆರವು ಪಡೆದು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದುಉಸ್ತುವಾರಿಸಚಿವರುತಾಕೀತು ಮಾಡಿದರು.
ಹಾನಿಯಾಗಿರುವ ಅಂಗನವಾಡಿ, ಶಾಲಾ ಕೊಠಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಾಸ್ಟೆಲ್‍ಗಳ ಕಟ್ಟಡಗಳನ್ನು ಸರಿಪಡಿಸಬೇಕು. ನಗರದ ಮುಖ್ಯ ಭಾಗದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿಯೂ ಆರೋಗ್ಯ ಸೇವೆ ನೀಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ 24*7 ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಬಡವರಿಗೆ, ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಯಾರಿಗೆ ಸೌಲಭ್ಯ ತಲುಪಿಸಬೇಕಿದೆಯೋ ಅಂತಹವರನ್ನು ಗುರುತಿಸುವ ಕೆಲಸ ನಿರ್ವಹಿಸಿ. ಪಟ್ಟಣ ನಗರ ಪ್ರದೇಶಗಳಲ್ಲಿ ಸ್ವಚ್ಚತೆ ಮೂಲ ಸೌಲಭ್ಯ ಸಮರ್ಪಕವಾಗಿಇರಬೇಕು. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅಲ್ಲಿನ ಜನಪ್ರತಿನಿಧಿಗಳೊಂದಿಗೆ ವಾರ್ಡ್‍ಗಳಿಗೆ ತೆರಳಿ ಪರಿಶೀಲಿಸಬೇಕು ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ನಿರಂತರವಾಗಿ ಸುರಿದ ಮಳೆ ಹಾಗೂ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳ ಭರ್ತಿ, ಕೆರೆಗಳು ತುಂಬಿದ್ದರಿಂದ ನೀರು ಹರಿದು ಅರಿಶಿನ, ಬಾಳೆ, ಜೋಳ, ಕೋಸುಇತರೆ ಬೆಳೆಗಳು ನಾಶವಾಗಿವೆ. ಮನೆಗಳು ನೀರಿನಿಂದ ನೆನೆದು ಕುಸಿಯುವ ಭೀತಿ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಗಳಿಂದ ಸಂಪೂರ್ಣ ಸಮೀಕ್ಷೆಯಾಗಬೇಕಿದೆ. ರಸ್ತೆ, ಮನೆಗಳ ನಿರ್ಮಾಣ ದುರಸ್ತಿಗೆ ಕೂಡಲೇ ಪರಿಹಾರಧನ ಬಿಡುಗಡೆ ಮಾಡಬೇಕು ಎಂದರು.
ಶಾಸಕ ಆರ್. ನರೇಂದ್ರ ಅವರು ಮಾತನಾಡಿ ಮಳೆಯಿಂದಾಗಿ ನಮ್ಮ ಭಾಗದಲ್ಲಿಆಲೂಗಡ್ಡೆ, ಕಬ್ಬುಇತರೆ ಬೆಳೆ ಹಾನಿಯಾಗಿವೆ. ಕೆರೆಗಳ ತುಂಬಿಸುವ ಕಾರ್ಯಆಗಬೇಕಿದೆ. ದಿಂಬಂ ನಲ್ಲಿರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧದಿಂದಮಲೆ ಮಹದೇಶ್ವರ ಬೆಟ್ಟ, ಹನೂರು ತಾಲೂಕಿನಇತರೆ ಭಾಗದಲ್ಲಿ ಲಾರಿಗಳ ಓಡಾಟರಾತ್ರಿ ವೇಳೆ ಹೆಚ್ಚಾಗಿದೆ.
ಹೆಚ್ಚು ಭಾರ ಹೊತ್ತ ಲಾರಿಗಳ ಸಂಚಾರದಿಂದರಸ್ತೆಗೆ ಹಾನಿಯಾಗುತ್ತಿದೆ ಎಂದು ಗಮನ ಸೆಳೆದರು.
ಶಾಸಕಎನ್. ಮಹೇಶ್‍ಅವರು ಮಾತನಾಡಿ ಮಳೆ ಹಾಗೂ ಪ್ರವಾಹದಿಂದಅತಿ ಹೆಚ್ಚು ತೊಂದರೆಗೆ ಒಳಗಾಗಿರುವುದು ಕೊಳ್ಳೇಗಾಲ ಕ್ಷೇತ್ರವಾಗಿದೆ. ಇಲ್ಲಿ ಕೆರೆಗಳಿಗೆ ಸಾಕಷ್ಟು ಹಾನಿಯಾಗಿದೆ. ಬೆಳೆನಷ್ಟ ಸೇರಿದಂತೆ ಸಂಭವಿಸಿರುವ ಎಲ್ಲಾಹಾನಿಗೆ ತುರ್ತಾಗಿಸಮಗ್ರಸಮೀಕ್ಷೆಕೈಗೊಂಡು ನಿಖರ ಅಂಶಗಳನ್ನು ಸಂಗ್ರಹಿಸಿ ನಷ್ಟವನ್ನು ನಿರ್ಧರಿಸಬೇಕು. ಪುನರ್ವಸತಿಕಾರ್ಯ ಆಗಬೇಕು. ರಸ್ತೆ, ಸೇತುವೆ, ಕಾಲುವೆ ಸೇರಿದಂತೆಎಲ್ಲಾ ದುರಸ್ತಿಗೆ ವಿಶೇಷ ಪರಿಹಾರ ಪ್ಯಾಕೇಜ್‍ಅಗತ್ಯವಿದೆಎಂದರು.
ಶಾಸಕಸಿ.ಎಸ್. ನಿರಂಜನ್‍ಕುಮಾರ್‍ಅವರು ಮಾತನಾಡಿಗುಂಡ್ಲುಪೇಟೆತಾಲೂಕಿನಲ್ಲಿ ಹತ್ತಿ, ಸಣ್ಣಈರುಳ್ಳಿ ಬೆಳೆಗೆ ತೊಂದರೆಯಾಗಿದೆ. ತುಂಬದಿರುವ ಕೆರೆಗಳಿಗೆ ನೀರುತುಂಬಿಸುವ ಕಾರ್ಯ ನಿಗದಿಯಂತೆ ನಡೆಯಬೇಕು.ಕೆರೆ ಸಂಬಂಧಿ ಕಾರ್ಯಗಳು ಶೀಘ್ರವೇ ಆರಂಭಿಸಬೇಕುಎಂದರು.
ಕಾಡಾಅಧ್ಯಕ್ಷ ಜಿ. ನಿಜಗುಣರಾಜು, ಜಿಲ್ಲಾಧಿಕಾರಿಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿಜಿಲ್ಲಾಧಿಕಾರಿಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕೆ.ಎಸ್. ಸುಂದರ್‍ರಾಜ್, ಉಪವಿಭಾಗಾಧಿಕಾರಿಗೀತಾ ಹುಡೇದ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.