ಮಳೆ, ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಆರ್.ಅಶೋಕ್ ಭೇಟಿ: ಪರಿಶೀಲನೆ

ಚಾಮರಾಜನಗರ, ಆ.06:- ಜಿಲ್ಲೆಯಲ್ಲಿ ಮಳೆ ಹಾಗೂ ಜಲಾಶಯಗಳಿಂದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿರುವ ವಿವಿಧ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತರಿಗೆ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಮಳೆ ಹಾನಿಯಿಂದ ತೊಂದರೆ ಗೀಡಾದ ಕುಟುಂಬಗಳಿಗೆ ಪರಿಹಾರ ವಿತರಿಸಿದರು.
ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮದ ಬಳಿ ಹರಿಯುವ ಕಾವೇರಿ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಯ ಪ್ರಮಾಣ, ಯಾವ ಸಂದರ್ಭದಲ್ಲಿ ನೀರು ಗ್ರಾಮಗಳಿಗೆ ನುಗ್ಗಲಿದೆ, ಇದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಸ್ಥಳೀಯ ದಾಸನಪುರ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ನೀರು ಹೆಚ್ಚಾದಾಗ ಗ್ರಾಮಗಳಿಗೆ ಆಗುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.
ಬಳಿಕ ಸಚಿವರು ಸುವರ್ಣಾವತಿ ನದಿ ಜಲಾಶಯದ ನೀರು ಹೆಚ್ಚಳದ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿರುವ ಯಳಂದೂರು ಭಾಗದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೆಲವೆಡೆ ಮನೆ ಆವರಣ, ಜಮೀನುಗಳಲ್ಲಿ ನೀರು ಆವೃತವಾಗಿರುವುದನ್ನು ವೀಕ್ಷಿಸಿದರು.
ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದರು. ಎಷ್ಟು ದಿನಗಳಿಂದ ಇಲ್ಲಿಆಶ್ರಯ ಪಡೆದಿದ್ದೀರಿ? ಏನು ತೊಂದರೆಗಳಿವೆ ಎಂದು ಸಚಿವರು ಖುದ್ದು ಸಂತ್ರಸ್ತರಿಂದ ವಿವರ ಪಡೆದರು. ಮನೆ ಹಾನಿಯಾದವರಿಗೆ ಪರಿಹಾರ ನೀಡಲಾಗುತ್ತದೆ. ಪ್ರವಾಹ ಇಳಿಮುಖವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಕಾಳಜಿ ಕೇಂದ್ರದಲ್ಲಿಯೇ ಇರಿ. ನಿಮಗೆ ನೆರವಾಗುವಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಸಚಿವ ಆರ್. ಅಶೋಕ್ ಅವರು ತಿಳಿಸಿದರು.
ಕಾಳಜಿ ಕೇಂದ್ರದಲ್ಲಿ ನೀಡಲಾಗುತ್ತಿರುವ ಊಟ, ಉಪಹಾರ, ಇತರೆ ಸೌಲಭ್ಯಗಳ ಬಗ್ಗೆ ಸಂತ್ರಸ್ತರಿಂದಲೇ ಕೇಳಿ ತಿಳಿದುಕೊಂಡ ಸಚಿವರು ಮೆನು ಪ್ರಕಾರಉತ್ತಮ ಊಟ, ಉಪಹಾರ ನೀಡಬೇಕು ಎಂದು ಸ್ಥಳದಲ್ಲಿಯೇ ಇದ್ದ ತಹಶೀಲ್ದಾರರಿಗೆ ತಾಕೀತು ಮಾಡಿದರು. ಹೊದಿಕೆ ಇತರೆ ಸಾಮಾಗ್ರಿಗಳನ್ನು ವಿತರಿಸಬೇಕುಎಂದು ಸೂಚಿಸಿದರು.
ಬಳಿಕ ಸಂತ್ರಸ್ತರೊಂದಿಗೆ ಕಾಳಜಿ ಕೇಂದ್ರದಲ್ಲಿಯೇ ಸಚಿವರು ಊಟ ಮಾಡಿದರು. ತದನಂತರ ಕಾಳಜಿ ಕೇಂದ್ರದ ಶಾಲಾ ಆವರಣದಲ್ಲಿ ಊರಿನ ಗ್ರಾಮಸ್ಥರು ಅಹವಾಲುಗಳನ್ನು ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಸಚಿವರು ಮಳೆ, ಪ್ರವಾಹದಿಂದ ಹಾನಿಗೀಡಾದ ಮನೆ, ಬೆಳೆಗೆ ಸರ್ಕಾರ ಪರಿಹಾರ ನೀಡುತ್ತಿದೆ. ಈ ಹಿಂದೆಇದ್ದ ಪರಿಹಾರ ಹಣವನ್ನು ಪ್ರಸ್ತುತದುಪ್ಪಟ್ಟು ಮಾಡಲಾಗಿದೆ. ಬೆಳೆ ಹಾನಿ ಪರಿಹಾರವನ್ನು 6,800 ರಿಂದ 13,800 ರೂ. ಹೆಚ್ಚಳ ಮಾಡಿದ್ದೇವೆ. ಮನೆಗೆ ನೀರು ನುಗ್ಗಿದರೆ 10 ಸಾವಿರರೂ, ಮನೆಯಗೋಡೆ ಕುಸಿದರೆ 50 ಸಾವಿರ, ಸಂಪೂರ್ಣವಾಗಿ ಕುಸಿದ ಮನೆಗೆ 5 ಲಕ್ಷ ಪರಿಹಾರ ನೀಡುತ್ತಿದ್ದೇವೆ.ನಿಮ್ಮಎಲ್ಲಾ ಮನವಿ ಹಾಗೂ ಅರ್ಜಿಗಳನ್ನು ಸ್ವೀಕರಿಸಿದ್ದೇನೆ. ಅಗತ್ಯಕ್ರಮ ವಹಿಸಲಿದ್ದೇವೆ. ಪರಿಹಾರ ಹಣತ್ವರಿತವಾಗಿ ನೀಡಲಿದ್ದೇವೆಎಂದರು.
ಇದೇ ವೇಳೆ ಮಾತನಾಡಿದ ಶಾಸಕಎನ್. ಮಹೇಶ್ ಅವರು 2018-19ನೇ ಸಾಲಿನಲ್ಲಿ ಪ್ರವಾಹತಲೆದೋರಿತ್ತು. ಪ್ರಸ್ತುತ ಪ್ರವಾಹದಿಂದಜಮೀನಿನಲ್ಲಿ ನಾಶವಾದ ಬೆಳೆ, ಮನೆ ಸರ್ವೆ ಮಾಡಿಸಲಾಗುತ್ತಿದೆ. ತೊಂದರೆಗೊಳಗಾದ ಕುಟುಂಬಗಳನ್ನು ಕಾಳಜಿ ಕೇಂದ್ರದಲ್ಲಿ ಇರಿಸಿದ್ದೇವೆ. ಪರಿಹಾರ ಹಣವನ್ನು ಹೆಚ್ಚಳ ಮಾಡಲಾಗಿದೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯತುಂಬಿದರು.
ಬಳಿಕ ಚಾಮರಾಜನಗರತಾಲೂಕಿನಚಂದಕವಾಡಿ, ಕೋಡಿಮೋಳೆ ಭಾಗಗಳನ್ನು ವೀಕ್ಷಿಸಿದ ಸಚಿವರು ಕೋಡಿಮೋಳೆ ಗ್ರಾಮದಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್‍ಗಳನ್ನು ವಿತರಿಸಿದರು.
ಆರಂಭದಲ್ಲಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ ಅವರು ರಾಜ್ಯದಲ್ಲಿ ಮಳೆ ಸಂತ್ರಸ್ತ ಜಿಲ್ಲೆಗಳಿಗೆ ಪ್ರವಾಸಕೈಗೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದೇವೆ. ಸರ್ಕಾರಬಡವರ ಪರವಾಗಿ ಇದ್ದು ಮಳೆ, ಬೆಳೆ ಹಾನಿಗೆ ಪರಿಹಾರತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಮುಂದಾಗಿದ್ದು ವ್ಯಾಪಕವಾಗಿ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದರು.
ರಾಜ್ಯದ ವಿವಿಧೆಡೆ ಪ್ರವಾಸ ಮಾಡುತ್ತಿದ್ದು, ಮಳೆ ಹಾನಿ ಪ್ರದೇಶಗಳಲ್ಲಿ ತೆರೆಯಲಾಗಿರುವಕಾಳಜಿ ಕೇಂದ್ರಗಳಿಗೆ ತೆರಳಿ ಪರಿಶೀಲಿಸಲಾಗುತ್ತಿದೆ. ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ 300 ಕೋಟಿರೂ. ಹಣ ಬಿಡುಗಡೆಯಾಗಿದೆ. ಇನ್ನೂ 500 ಕೋಟಿರೂ. ಬಿಡುಗಡೆ ಮಾಡಲಿದ್ದೇವೆ. ಜಿಲ್ಲಾಧಿಕಾರಿಗಳ ಖಾತೆಯಲ್ಲೂಹಣ ಲಭ್ಯವಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿಉತ್ತಮ ಮಳೆಯಾಗುತ್ತಿದೆ. ಕೆರೆ ಕಟ್ಟೆಗಳು ತುಂಬಿವೆ ಎಂದು ಸಚಿವಆರ್. ಅಶೋಕ ಅವರು ತಿಳಿಸಿದರು.
ಕಾಡಾಅಧ್ಯಕ್ಷÀಜಿ. ನಿಜಗುಣರಾಜು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‍ರಾಜ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‍ರಾಜ್, ಉಪವಿ ಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಆನಂದಪ್ಪ ನಾಯಕ, ಇತರೆ ಅಧಿಕಾರಿಗಳು ಭೇಟಿ ಸಂದರ್ಭದಲ್ಲಿ ಇದ್ದರು.