ಮಳೆ ನೀರು ಹಿಡಿದಿಡಲು ಚೆಕ್‍ಡ್ಯಾಂ ಸಹಕಾರಿ: ಹರ್ಷವರ್ಧನ

ಅಫಜಲಪುರ:ಎ.5: ಮಳೆಗಾಲದಲ್ಲಿ ಮಳೆ ನೀರು ಹಿಡಿದಿಟ್ಟುಕೊಂಡು ಅಂತರ್ಜಲ ವೃದ್ದಿಯಾಗಲು ಚೆಕ್‍ಡ್ಯಾಂಗಳು ಸಹಕಾರಿ ಎಂದು ಕಾಡಾ ಅಧ್ಯಕ್ಷ ಹರ್ಷವರ್ಧನ ಗೋಗಳೆ ಹೇಳಿದರು.

ತಾಲೂಕಿನ ಮಾತೋಳಿ ಗ್ರಾಮದಲ್ಲಿ ನಿರ್ಮಿಸಿದ ಚೆಕ್‍ಡ್ಯಾಂ ಕಾಮಗಾರಿ ವಿಕ್ಷಿಸಿ ಮಾತನಾಡಿದ ಅವರು ನಮ್ಮ ಇಲಾಖೆಯಿಂದ ಚೆಕ್‍ಡ್ಯಾಂ, ಹೊಲ ಗದ್ದೆಗಳಿಗೆ ಹೋಗುವ ರಸ್ತೆಗಳಿಗೆ ಮುರುಮ ಹಾಕಿಸುವುದು, ಸಿಡಿ ಕಾಮಗಾರಿಗಳನ್ನು ಮಾಡಿ ರೈತರಿಗೆ ಅನುಕೂಲ ಮಾಡಲಾಗುತ್ತಿದೆ. ತಾಲೂಕಿನಲ್ಲಿ ನಡೆದಿರುವ ಕಾಮಗಾರಿಗಳನ್ನು ವಿಕ್ಷಣೆ ಮಾಡಿದ್ದು ಗುಣಮಟ್ಟದ ಕೆಲಸಗಳಾಗಿವೆ ಎಂದರು.

ಎಇಇ ವಿಜಯಲಕ್ಷ್ಮೀ ದೊಡ್ಮನಿ ಮಾತನಾಡಿ ಕಳೆದ ವರ್ಷ 21 ಚೆಕ್‍ಡ್ಯಾಂ ನಿರ್ಮಿಸಿದ್ದೇವೆ. ಈ ವರ್ಷ ಚೆಕ್‍ಡ್ಯಾಂ, ಮುರುಮ ರಸ್ತೆ, ಸಿಡಿ ಸೇರಿ 7 ಕಾಮಗಾರಿಗಳನ್ನು 70 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜೆಇಗಳಾದ ಅಶೋಕ ವೈದ್ಯ, ಖದೀರ್ ಸೇರಿದಂತೆ ರೈತರು ಇದ್ದರು.