ಮಳೆ ನೀರು ಸಂರಕ್ಷಣೆ: ಬೀದಿ ನಾಟಕ ಪ್ರದರ್ಶನ

ಬೀದರ್: ಮಾ.24:ಮಳೆ ನೀರು ಸಂರಕ್ಷಣೆ ಕುರಿತು ನೆಹರೂ ಯುವ ಕೇಂದ್ರ ಹಾಗೂ ಮಾಡಗೂಳದ ಭಗತ್‍ಸಿಂಗ್ ಯುವ ಕ್ರಾಂತಿ ಕಲಾವಿದರ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಆಣದೂರು ಹಾಗೂ ಕೊಳಾರ(ಕೆ) ಗ್ರಾಮಗಳಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.

ಮಳೆ ನೀರು ಸಂಗ್ರಹಣೆ ಹಾಗೂ ಮರು ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಮಳೆ ನೀರು ಸಂಗ್ರಹಕ್ಕೆ ಪ್ರತಿ ಮನೆಗಳಲ್ಲೂ ಇಂಗು ಗುಂಡಿ ತೋಡಬೇಕು. ಮನೆ ಛಾವಣಿ ಮೇಲೆ ಬೀಳುವ ಮಳೆ ನೀರು ಗುಂಡಿಗೆ ಸೇರುವಂತೆ ವ್ಯವಸ್ಥೆ ಮಾಡಬೇಕು ಎಂದು ನೆಹರೂ ಯುವ ಕೇಂದ್ರದ ಲಕ್ಷ್ಮಣ ಪಿ. ಮಚ್ಕೊರೆ ಹೇಳಿದರು.

ಮಳೆ ನೀರನ್ನು ಬಟ್ಟೆ ತೊಳೆಯಲು, ಕೈತೋಟಕ್ಕೆ, ಮರ, ಗಿಡಗಳಿಗೆ ಬಳಸಬಹುದು ಎಂದು ತಿಳಿಸಿದರು.

ನೀರು ಬಹಳ ಅಮೂಲ್ಯವಾಗಿದೆ. ಕಾರಣ, ಹಿತ ಮಿತವಾಗಿ ಬಳಸಬೇಕು. ಅನಗತ್ಯವಾಗಿ ವ್ಯರ್ಥ ಮಾಡಬಾರದು ಎಂದು ಹೇಳಿದರು.

ಕಲಾವಿದರಾದ ಸಾರಿಕಾ, ರಜನಿಕಾ, ಉದಿತ್ ರಾಠೋಡ್, ಬೀರಗೊಂಡ ಮೇತ್ರೆ, ಮಲ್ಲಿಕಾರ್ಜುನ ಇದ್ದರು.