ಮಳೆ ನೀರು ಮನೆಗೆ ನುಗ್ಗದಂತೆ ಪರ್ಯಾಯ ವ್ಯವಸ್ಥೆ

ಹರಿಹರ ಜು 29;  ರಾತ್ರಿ ಸುರಿದ ಮಳೆಗೆ ಹಾನಿಗೀಡಾದ ಆಶ್ರಯ ಬಡಾವಣೆ  ಹಲ್ಲಾಪುರ  ನಗರದ ವಿವಿಧ ಬಡಾವಣೆಗಳಿಗೆ ನಗರಸಭೆಯ ಪೌರಾಯುಕ್ತ ಬಸವರಾಜ್ ಐಗೂರು ತೆರಳಿ ಅಲ್ಲಿನ ಅವ್ಯವಸ್ಥೆ ಮತ್ತು ನಗರದ ಜನತೆಗೆ ಆಗುತ್ತಿರುವ ತೊಂದರೆ ಬಗ್ಗೆ ಅಹವಾಲುಗಳನ್ನು ಆಲಿಸಿದರುಈ ವೇಳೆ ಮಾತನಾಡಿದ ಅವರು ಈಗಾಗಲೇ ನಗರೋತ್ಥಾನ ನಾಲ್ಕನೇ ಯೋಜನೆ ಅಡಿಯಲ್ಲಿ ಟೆಂಡರ್ ಪ್ರಕ್ರಿಯೆ ಆಗಿದ್ದು ಶೀಘ್ರದಲ್ಲೇ ಕಾಮಗಾರಿ ಮಾಡಲು ಮುಂದಾಗುತ್ತೇವೆ ನಗರದ .31 ವಾರ್ಡ್ ಗಳಿಗೆ ಭೇಟಿ ನೀಡಿ ರಸ್ತೆ ಚರಂಡಿ ವಿದ್ಯುತ್ ದ್ವೀಪ ಶುದ್ಧ ಕುಡಿಯುವ ನೀರು ಅತಿ ತುರ್ತು ಇರುವಂತ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ನಗರಸಭೆಯ 31 ವಾರ್ಡಗಳ ಸದಸ್ಯರು ತಮ್ಮ ತಮ್ಮ ವಾರ್ಡಗಳ ನೂನ್ಯತೆ ಬಗ್ಗೆ ಕ್ರಿಯೆ ಯೋಜನೆ ತಯಾರಿಸಲಾಗಿದ್ದು ಹಂತಹಂತವಾಗಿ ವಾರ್ಡಿನ ಜನರ ಸಮಸ್ಯೆಯನ್ನು ಬಗೆಹರಿಸಿ ಕೊಡುವುದಾಗಿ ನಿವಾಸಿಗಳಿಗೆ ಭರವಸೆ ನೀಡಿದರು.ಮಳೆ ನೀರು ಬಂದಾಗ ಎಲ್ಲಿ ಸಮಸ್ಯೆ ಆಗುತ್ತದೆ ಅದಕ್ಕೆ ಮೊದಲು ಆದ್ಯತೆ ನೀಡಲಾಗುತ್ತದೆ.ನಾಗರಿಕರು ತಮ್ಮ ವಾರ್ಡಿನ ಸದಸ್ಯರೊಂದಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಿ ನಾವು ಮತ್ತು ನಮ್ಮ ತಂಡ ಪ್ರತಿ ವಾರ್ಡಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಮಾಡಲಾಗುತ್ತದೆ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳು ಕಾರ್ಮಿಕರೊಂದಿಗೆ ಸಹಕರಿಸಬೇಕೆಂದು ಹೇಳಿದರುನಗರಸಭಾ ಸದಸ್ಯ ಹನುಮಂತಪ್ಪ ಆಟೋ. ಆರೋಗ್ಯ ನಿರೀಕ್ಷಕ ರವಿಪ್ರಕಾಶ್. ಸ್ಥಳೀಯ ನಿವಾಸಿಗಳಾದ ರಾಜು ಪ್ಲಂಬರ್. ಹೊನ್ನಪ್ಪ. ಸಾಗರ ಇತರರು ಇದ್ದರು

Attachments area