ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.17:  ಬೇಸಿಗೆ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದು ಸಾಂಕ್ರಾಮಿಕ ಕಾಯಿಲೆಯಗಳು ಹೆಚ್ಚುತ್ತದೆ ಆದರಿಂದ ಸಾರ್ವಜನಿಕರು ಮುಂಜಾಗ್ರತಾವಾಗಿ ಮನೆ ಕಟ್ಟಡಗಳ ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು  ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಹೇಳಿದರು.
ನಗರದ 31 ನೇ ವಾರ್ಡ್  ವಿರುಪಾಪುರ ತಾಂಡದಲ್ಲಿ  ಡೆಂಗ್ಯೂ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಣಾಡಿದರು. ಈ ಒಂದು ಡೆಂಗ್ಯೂ ಜ್ವಾರ ಹೇಗೆ ಹರಡುತ್ತದೆ ಅಂದ್ರೇ ಇದು ಹೆಣ್ಣು, ಈಡಿಸ್, ಈಜಿಪ್ಡಿ ಸೂಳ್ಳೆ ಕಡಿತದಿಂದ  ಡೆಂಗ್ಯೂ ಹರಡುತ್ತದೆ, ರಕ್ತನಾಳಗಳಿಗೆ ಈ ವೈರಸ್ ಹಾನಿ ಉಂಟು ಮಾಡುತ್ತದೆ. ಈ ಸೊಳ್ಳೆ ಹಗಲಿನಲ್ಲಿಯೇ ಕಡಿಯುತ್ತದೆ ಆದಕಾರಣ ಡೆಂಗ್ಯೂ ಜ್ವಾರ ಬರದಂತೆ ನಾವು ನೀವು ನೋಡಿಕೊಳಬೇಕಾಂದ್ರೆ ಮುಂಜಾಗ್ರತೆಯ ಕ್ರಮಗಳು ಸಾಮಾನ್ಯ ಜ್ವರವನ್ನು ನಾವು ನಿರ್ಲಕ್ಷ್ಯವಸದೆ ಸಮೀಪದ ಆರೋಗ್ಯ ಕೇಂದ್ರೆಕ್ಕೆ ಹೋಗ ಚಿಕಿತ್ಸೆ ಪಡೆಯಬೇಕು. ನಂತರ ನಿಮ್ಮ ನಿಮ್ಮ ಮನೆಯಲ್ಲಿ  ಎರಡರಿಂದ ಮೂರು ದಿನಗಳಗೊಮ್ಮೆ ನೀರು ಬದಲಾಯಿಸಿ  ಸ್ವಚ್ಚಗೊಳಿಸಬೇಕು  ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಲೇರಿಯಾ ತಾಲೂಕು ಮೇಲ್ವಿಚಾರಕರಾದ ದೇವೇಂದ್ರಗೌಡ, ಮಲೇರಿಯಾ ಲಿಂಕ್ ವರ್ಕ್ ರ ಹೆಚ್.ಸುರೇಶ, ರಮೇಶ, ಆರೋಗ್ಯ ಸಿಬ್ಬಂದಿ ಖಾಸೀಂಬಿ, ಸರಸ್ವತಿ, ಆಶಾ ಕಾರ್ಯಕರ್ತಯರಾದ ಸರೋಜಾಬಾಯಿ,ದೀಪಾ,ಕೆ.ಲಲಿತಾ, ಸುಮಾ, ಮೀನಾಕ್ಷಿ, ಜ್ಯೋತಿ, ಗೌಸೀಯಾ,ಸೇರಿದಂತೆ ಇತ್ತರರು ಇದ್ದರು