ಮಳೆ ನೀರಿಗೆ ಕೊಚ್ಚಿಹೋದ ಸೇತುವೆ ರಸ್ತೆ: ದುರಸ್ಥಿಗೆ ಆಗ್ರಹ

ಚಿಂಚೋಳಿ,ಸೆ.25- ತಾಲೂಕಿನ ಹುಲಸ್ಗುಡ್ ಗ್ರಾಮದ ಹತ್ತಿರದ ಸೇತುವೆ ಮೇಲಿನ ರಸ್ತೆ ಮಳೆನೀರಿನಿಂದ ಕೊಚ್ಚಿಹೋಗಿದ್ದು, ಇದರ ಪಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಚಿಂಚೋಳಿ ಮತ್ತು ಕಲಬುರ್ಗಿ ಮಾರ್ಗದ ಮುಖ್ಯರಸ್ತೆಯಲ್ಲಿ ಬರುವ ಹುಲಸ್ಗುಡ್ ಗ್ರಾಮದ ಸೇತುವೆಯನ್ನು ಎತ್ತರಿಸಿಕೊಂಡು ಪುನರ ನಿರ್ಮಾಣ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ರೈತನ ಹೊಲದ ಫಲವತ್ತಾದ ಮಣ್ಣು ಸಂಪೂರ್ಣ ನೀರಿನಿಂದ ಕೊಚ್ಚಿಕೊಂಡು ಹೋಗಿದೆ ಇವರ ನೆರವಿಗೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಆನಂದ ಹಿತ್ತಲ ಅವರು ಆಗ್ರಹಿಸಿದ್ದಾರೆ.