ಮಳೆ ನಿಂತರೂ ಮುಂದುವರೆದ ದಾಖಲೆಯ ತುಂಗಭದ್ರೆಯ ಹೊರಹರಿವು.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು17: ಕಲ್ಯಾಣ ಕರ್ನಾಟಕ ಸೇರಿದಂತೆ ನೆರಯ ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳ ಜನ ಜಾನುವಾರುಗಳ ಜೀವನಾಡಿಯಾಗಿರುವ ತುಂಗಭದ್ರೆ ಮಡಿಲಲ್ಲಿ ಮಳೆ ನಿಂತರೂ ಪ್ರವಾಹ ಮಾತ್ರ ಮುಂದುವರೆದಿದೆ. ದಾಖಲೆಯ ಒಳಹರಿವು ಬರುತ್ತಿದೆ. 
ಮಲೆನಾಡು ಪ್ರದೇಶದಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ ತುಂಗಾ ಹಾಗೂ ಭದ್ರಾ ಜಲಾಶಯಗಳು ತುಂಬಿದ ಪರಿಣಾಮ ಹೊರಹರಿವು ಮುಂದುವರೆದಿದ್ದು ತುಂಗಭದ್ರಾ ಜಲಾಶಯದ ಒಳಹರಿವು ಸಹ ಮುಂದುವರೆದಿದೆ. 
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಎರಡು ಜಲಾಶಯಗಳು ತುಂಬಿ ನೀರು ಹೊರಬರುತ್ತಿರುವ ಕಾರಣ ಹೊಸಪೇಟೆಯ ತುಂಗಭಧ್ರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಈ ಜಲಾನಯನ ಪ್ರದೇಶದಲ್ಲಿ  ಮಳೆ ನಿಂತರೂ ಸಹ ಇಂದು 1.66 ಲಕ್ಷಕ್ಕೂ ಅಧಿಕ ನೀರನ್ನು ತನ್ನ ವೊಡಲೊಳಗೆ ಬರಮಾಡಿಕೊಳ್ಳುತ್ತಿದೆ. ಸಹಜವಾಗಿಯೇ ತುಂಗಭದ್ರಯ ಒಡಲು ತುಂಬದ್ದು ಈ ಭಾಗದ ಜನ ಜಾನುವಾರುಗಳಲ್ಲಿ ಹರ್ಷದ ನಗೆಯೂ ಸಹ ತುಂಬಲಿದ್ದು ಭೋರ್ಗರೆಯುವ ಜಲದಾರೆ ಪ್ರವಾಸಿಗರನ್ನು ಆಕರ್ಷಸಲಾರಂಭಿಸಲಿ
ಇಂದಿನ ನೀರಿನ ಮಟ್ಟ: ನೀರು ಮಟ್ಟ : 1633, ಅಡಿ,  ಇಂದಿನ ಮಟ್ಟ: 1630.12 ಅಡಿ,  ನೀರು ಸಂಗ್ರಹ ಸಾಮಥ್ರ್ಯ: 105.788 ಟಿಎಂಸಿ, ಇಂದಿನ ಸಂಗ್ರಹ 90.514 ಟಿಎಂಸಿ, ಒಳಹರಿವು 166322 ಕ್ಯೂಸೆಕ್ಸ್, ಹೊರಹರಿವು 148139 ಕ್ಯೂಸೆಕ್ಸ್ ಆಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.