
ಅಥಣಿ : ಜು.27:ರಾತ್ರಿ ಇಡಿ ಸತತವಾಗಿ ಮಳೆ ಸುರಿದ ಪರಿಣಾಮ ಇಂದು ನಸುಕಿನ ಜಾವ ಮನೆಯ ಗೋಡೆ ಕುಸಿದು ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ಪಟ್ಟಣದಲ್ಲಿ ನಡೆದಿದೆ,
ಪಟ್ಟಣದ ಹನುಮಾನ ಅಗಸಿ ಹತ್ತಿರ ಇರುವ ತಾಸೆ ಗಲ್ಲಿಯ ನಿವಾಸಿ ಕಾಶಿನಾಥ ಅಪ್ಪಾಸಾಬ ಸುತಾರ (23) ಮೃತ ದುರ್ದೈವಿಯಾಗಿದ್ದು, ಮಳೆಯಿಂದಾಗಿ ಮನೆಯ ಗೋಡೆ ನೆನೆದು ಕುಸಿದು ಯುವಕನ ಮೈ ಮೇಲೆ ಕಲ್ಲು ಮಣ್ಣು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ,
ಘಟನಾ ಸ್ಥಳಕ್ಕೆ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ ಐ ಶಿವಶಂಕರ ಮುಕರಿ, ಅಥಣಿ ಹೋಬಳಿ ಕಂದಾಯ ನಿರೀಕ್ಷಕ ಎಸ್ ಬಿ ಮೆಣಸಂಗಿ, ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ, ಪೆÇೀಲೀಸ್ ಸಿಬ್ಬಂದಿ ರಮೇಶ ಹಾದಿಮನಿ, ಭೇಟಿ ಪರಿಶೀಲನೆ ನಡೆಸಿದರು,
ಅಥಣಿ ಪೆÇೀಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ,
ಯುವಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ,