ಮಳೆ-ಗಾಳಿಗೆ ನೆಲಕ್ಕುರುಳಿದ ಬೃಹತ್ ಮರ

ಸಿರವಾರ,ಜೂ.೦೨-
ತಾಲೂಕಿನ ಪಟಕನದೊಡ್ಡಿ ಗ್ರಾಮದಲ್ಲಿ ಗುರುವಾರ ಸಂಜೆ ಗಾಳಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ಜೋರಾದ ಗಾಳಿಗೆ ಮನೆಯ ಟಿನ್‌ಗಳು ಹಾರಿಹೋಗಿದ್ದು, ಜಾನುವಾರುಗಳ ಶೆಡ್ ನ ಮೇಲೆ, ರಸ್ತೆಯ ಮೇಲೆ ಬೃಹತ್ ಗಿಡಗಳು ಉರುಳಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಅನಾಹುತ ಸಂಭವಿಸಿಲ್ಲ. ಮಳೆ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಗ್ರಾಮಸ್ಥರು ಕರೆಂಟ್ ಇಲ್ಲದೆ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು.