ಮಳೆ-ಗಾಳಿಗೆ ನಲುಗಿದ ಹರಪನಹಳ್ಳಿ.

ಹರಪನಹಳ್ಳಿ,ಮೇ,2; ಕಳೆದ ಒಂದು ವಾರದಿಂದ ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಹರಪನಹಳ್ಳಿ ತಾಲ್ಲೂಕಿನ ಜನತೆಗೆ, ಶನಿವಾರ ಸುರಿದ ಗಾಳಿ ಸಮೇತ ಭಾರಿ ಮಳೆಯು ತಂಪೆರಗಿದೆ. ಮತ್ತೊಂದೆಡೆ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಆಗುವಂತೆ ಮಾಡಿದ್ದರೆ, ಹಲವೆಡೆ ಮನೆಗಳು ಜಖಂಗೊಂಡಿವೆ.
ತಾಲೂಕಿನಾದ್ಯಂತ  ತಾಸೀಗೂ ಹೆಚ್ಚು ಸಮಯ ಸುರಿದ ಧಾರಕಾರ ಮಳೆಗೆ ಅನಂತನಹಳ್ಳಿ ಗ್ರಾಮದಲ್ಲಿ ಕೌಳೇರ ವೀರುಪಾಕ್ಷಪ್ಪ ಅವರ ಮನೆಗಳು ನೀರಿನಿಂದ ಅವೃತವಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಮನೆಗೆ ನುಗ್ಗಿದ್ದು ಮಳೆಯ ನೀರನ್ನು ತುಂಬಿ ಹೊರ ಹಾಕಲಾಗುತ್ತಿದೆ. ಪಕ್ಕದಲ್ಲಿ ಶಿವಮೊಗ್ಗ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಎತ್ತರದ ಪ್ರದೇಶದಲ್ಲಿರುವುದರಿಂದ ನಮ್ಮ ಮನೆಗಳು ತಗ್ಗು ಪ್ರದೇಶದಲ್ಲಿವೆ. ಹೆದ್ದಾರಿಯ ಅಕ್ಕ ಪಕ್ಕ ಚರಂಡಿಗಳ ನಿರ್ಮಾಣವಿಲ್ಲದೇ ಇರುವ ಕಾರಣಕ್ಕೆ ನೀರು ಗಲೀಜಿನೊಂದಿಗೆ ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುಮಾರು ಎರಡರಿಂದ ಎರಡುವರೆ ಅಡಿಗಳಷ್ಟು ನೀರು ಮನೆಯ ಮುಂದೆ ನಿಂತಿದೆ, ಹಾಗೂ ಗಿಡಗಳಲ್ಲಿರು ಮಾವಿನ ಕಾಯಿಗಳು ಉದುರಿಹೋಗಿ ಈ ವರ್ಷದ ಮಾವಿನ ಬೆಳೆಯಲ್ಲ ನಾಶವಾಗಿದೆ  ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಗೆಹರಿಸಲು ಮೀನ ಮೇಶ ಎಣಿಸುತ್ತಿರುವುದು ಯಾವ ಪುರುಶಾರ್ಥಕ್ಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಬೆಳಿಗ್ಗೆಯಿಂದ ಪಟ್ಟಣದಲ್ಲಿ ತುಂಬಾ ಬಿಸಿಲು ಇತ್ತು, ಸಂಜೆ ನಾಲ್ಕು ಗಂಟೆಗೆ ಮೊಡ ಕವಿದ ವಾತವಾರಣ ನಿರ್ಮಾಣವಾಗಿ, ಗುಡುಗು ಸಹಿತ ಧಾರಕಾರ ಮಳೆ-ಗಾಳಿ ಬೀಸಿತು. ಸುಮಾರು ಒಂದು ತಾಸೀಗೂ ಹೆಚ್ಚು ಸಮಯ ಸುರಿದ ಮಳೆಯೊಂದಿಗೆ ಗುಡುಗು ಸಿಡಿಲಿನ ಆರ್ಭಟವೂ ಹೆಚ್ಚಾಗಿತ್ತು. ಇದರಿಂದಾಗಿ ಹರಪನಹಳ್ಳಿ ಪಟ್ಟಣ ಸೇರಿದಂತೆ ಗುಂಡಗತ್ತಿ, ಉಚ್ಚಂಗಿದುರ್ಗ, ಅನಂತನಹಳ್ಳಿ, ನೀಲಗುಂದ, ಚಿರಸ್ಥಹಳ್ಳಿ ಸೇರಿದಂತೆ ಆನೇಕ ಗ್ರಾಮಗಳ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿ ಸುರಿದು ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿರುವ ಘಟನೆಗಳು ಜರುಗಿರುವ ವರದಿಯಾಗಿವೆ.