ಮಳೆ ಕೊರತೆ ಹಿನ್ನೆಲೆ ಜಾನುವಾರುಗಳು ಸಾಕುವುದು ಕಷ್ಟಕರವಾಗಿದೆ-ಶಾಸಕಿ

ದೇವದುರ್ಗ.ಡಿ.೨೩- ಮಳೆ ಕೊರತೆಯಿಂದ ಜಾನುವಾರುಗಳನ್ನು ಸಾಕುವುದು. ದುಸ್ತರವಾಗಿದೆ. ಪಶುಗಳ ಆರೈಕೆಗಾಗಿ ಸರ್ಕಾರ ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ತಾಲೂಕಿನ ಕ್ಯಾದಿಗ್ಗೇರಾ ಗ್ರಾಮದಲ್ಲಿ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ರೈತರಿಗೆ ಮೇವಿನ ಕಿರುಪಟ್ಟಣ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಶುಗಳು ರೈತ ಸ್ನೇಹಿತರಾಗಿದ್ದು, ಅವುಗಳ ಸಂತತಿ ಕಾಲಾನುಕ್ರಮವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ಜಾನುವಾರುಗಳ ಉಳಿವಿಗಾಗಿ ರೈತರು ಶ್ರಮಿಸಬೇಕಿದ್ದು, ಸಾವಯುವ ಕೃಷಿಗೆ ಸಹಕಾರಿಯಾಗಲಿದೆ. ಕೆಡಿಪಿ ಸಭೆಯಲ್ಲಿ ಇಲಾಖೆ ಸಾಧಕ ಬಾಧಕಗಳನ್ನು ಚರ್ಚಿಸಲಾಗಿದೆ ಎಂದರು.
ಸಹಾಯಕ ನಿರ್ದೇಶಕ ಬಸವರಾಜ ಮೀರಸ್ದಾರ್ ಮಾತನಾಡಿ, ಬರಗಾಲ ಪೀಡಿತ ಘೋಷಣೆ ಹಿನ್ನೆಲೆ ಬೇಸಿಗೆಯಲ್ಲಿ ರೈತರಿಗೆ ಮೇವಿನ ಕೊರತೆಯಾಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಉಚಿತವಾಗಿ ಮೇವಿನ ಬೀಜಗಳನ್ನು ವಿತರಣೆ ಮಾಡುತ್ತಿದೆ. ಜಾನುವಾರುಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅನುಗ್ರಹ ಯೋಜನೆ ಅಡಿಯಲ್ಲಿ ಹತ್ತು ಸಾವಿರ ನೀಡಲಾಗುತ್ತಿದೆ ಎಂದರು.
ರೈತರಿಗೆ ಮೇವಿನ ಬೀಜ ಖನಿಜ ಲವಣ ವಿತರಣೆ ಮಾಡಲಾಯಿತು. ಗ್ರಾ.ಪಂ.ಅಧ್ಯಕ್ಷೆ ನೀಲಮ್ಮ ರಾಜಶೇಖರ ರಾಠೋಡ್, ಪ್ರಮುಖರಾದ ವಿಶ್ವನಾಥ ಮಾಲಿ ಪಾಟೀಲ್, ಲಕ್ಷ್ಮೀ, ಸಿದ್ದನಗೌಡ ಮೂಡಲಗುಂಡ, ಶರಣಗೌಡ, ಅಯ್ಯನಗೌಡವಂದಲಿ, ಸಿದ್ದಣ್ಣ ದೊಂಡಂಬಳಿ, ತಿಮ್ಮರಡಿ ಜಾಗಟಗಲ್, ಬಸವರಾಜ ನಾಯಕ, ದಾವುದ್‌ಔಂಟಿ, ಗೊಂವಿದರಾಜ್ ಇತರರಿದ್ದರು.

೨೨ ಅರಕೇರಾ ೦೧ : ಅರಕೇರಾ ತಾಲೂಕಿನ ಕ್ಯಾದಿಗ್ಗೇರಾ ಗ್ರಾಮದಲ್ಲಿ ಪಶುಪಾಲನ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ಆಕಸ್ಮಿಕವಾಗಿ ಸಾವನ್ನಪ್ಪಿದ ಜಾನುವಾರುಗಳ ರೈತರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಅನುಗ್ರಹ ಯೋಜನೆ ಅಡಿಯಲ್ಲಿ ಶುಕ್ರವಾರ ಪ್ರಮಾಣ ಪತ್ರ ವಿತರಿಸಿದರು.