ಮಳೆ ಇಲ್ಲದೆ ಒಣಗುತ್ತಿದೆ ಮೆಕ್ಕೆಜೋಳದ ಬೆಳೆ; ರೈತರ ಸಂಕಷ್ಟ ಕೇಳುವವರಿಲ್ಲ

ಸಂಜೆವಾಣಿ ವಾರ್ತೆ

ಹರಿಹರ.ಸೆ.೧;  ಮಳೆಯಿಲ್ಲದೇ ಬೆಳೆ ವಿಫಲವಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.  ಮೆಕ್ಕೆಜೋಳ ಬೆಳೆ ಒಣಗಿ ರೈತನ ಗೋಳು ಕೇಳುವವರಿಲ್ಲದೆ ಬೆಳೆಗಳನ್ನು ನಾಶ ಮಾಡುವುದಕ್ಕೆ ರೈತರು ಮುಂದಾಗಿದ್ದಾರೆ.  ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಹೊಸ ಸಿಡೇನೂರು ಗ್ರಾಮದ ರೈತ ಆನಂದಪ್ಪ ರುದ್ರಪ್ಪ ಒಡೆಯಪುರ್ ಅವರು ತಮ್ಮ ಸಂಕಷ್ಟವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರುರೈತರ ಜೀವನದಲ್ಲಿ ಪ್ರಕೃತಿಯೊಂದಿಗೆ ಸರ್ಕಾರ ಕೂಡ ಚೆಲ್ಲಾಟ ಆಡುತ್ತಿದೆ. ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದೆ.  ಸಂಬಂಧಿಸಿದ ಅಧಿಕಾರಿ ಜನ ಪ್ರತಿನಿಧಿಗಳು ರೈತರ ಕಡೆಗೆ ಗಮನ ಹರಿಸದೆ ಇರುವುದು ರೈತಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಕ್ಕೆಜೋಳ ಬೆಳೆ ಮಳೆ  ಇಲ್ಲದೆ  ಸಂಪೂರ್ಣವಾಗಿ ಒಣಗಿ ಹೋಗಿದ್ದು  ಅದನ್ನು ನಾಶಪಡಿಸುವುದಕ್ಕೆ ಮುಂದಾಗಿದ್ದೇವೆ ಎಂದರುರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರದಿಂದ ರೈತರ ಬದುಕು ಅತಂತ್ರವಾಗಿದೆ. ಸಾವಿರಾರು ಖರ್ಚು ಮಾಡಿ ಬೆಳೆದಿರುವ ಮೆಕ್ಕೆಜೋಳ ಬಿಸಿಲಿನ ತಾಪಕ್ಕೆ ಬಾಡುತ್ತಿದೆ. ಮಳೆ ಇಲ್ಲದೆ ರೈತರ ಬದುಕು ಕಂಗಾಲಾಗಿದೆ ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ಬಿತ್ತನೆ ಮಾಡಿದ್ದ  ಮೆಕ್ಕೆ ಜೋಳದ ಜತೆಗೆ ಜಾನುವಾರುಗಳ ಮೇವಿನ ಬೆಳೆಯೂ ನಾಶವಾಗಿದ್ದು, ಕೂಡಲೇ ಸರ್ಕಾರದ ಜನ ಪ್ರತಿನಿಧಿಗಳು ಕೃಷಿ ಅಧಿಕಾರಿಗಳು ಬೆಳೆ ನಾಶ ಆಗಿರುವ ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲಿಸಿ ರೈತರಿಗಾಗಿರುವ ತೊಂದರೆಗಳನ್ನು ಸರಿಪಡಿಸಬೇಕೆಂದು  ರೈತರ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಿದರು