ಮಳೆ ಅವಾಂತರ ಗುತ್ತಿಗನೂರು ಹಳ್ಳದಲ್ಲಿ 20 ಮೇಕೆಗಳು ನೀರುಪಾಲು


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.8:  ಸಮೀಪದ ಗುತ್ತಿಗನೂರು ಗ್ರಾಮದಲ್ಲಿ ರಾತ್ರಿಸುರಿದ ಅಪಾರ ಮಳೆಗೆ ಗುತ್ತಿಗನೂರು ಹಳ್ಳ ತುಂಬಿಹರಿದಿದ್ದು, ಹಳ್ಳದ ಪಕ್ಕದಲ್ಲಿ ಮೇಕೆಗಳನ್ನು ಬೀಡುಬಿಟ್ಟಿದ್ದ 20 ಮೇಕೆಗಳು ಹರಿಯುವ ಹಳ್ಳದಲ್ಲಿ ನೀರುಪಾಲಾದ ಘಟನೆ ಬುಧವಾರ ಬೆಳಿಗ್ಗೆ ಜರುಗಿದೆ.
ಗುತ್ತಿಗನೂರು ಗ್ರಾಮದ ದೊಡ್ಡಪ್ಪ ಎಂಬ ರೈತರಿಗೆ ಸೇರಿದ ಮೇಕೆಗಳು ಎಂದು ತಿಳಿದುಬಂದಿದೆ. ಪ್ರಾರಂಭದಲ್ಲಿ ಗುತ್ತಿಗನೂರು ಗ್ರಾಮದ ರೈತ ದೊಡ್ಡಪ್ಪ ಹಳ್ಳದ ಪಕ್ಕದಲ್ಲಿ ಮೇಕೆಗಳ ಹಿಂಡನ್ನು ಬೀಡುಬಿಟ್ಟಿದ್ದನು. ರಾತ್ರಿಸುರಿದ ಅಪಾರ ಮಳೆಗೆ ಹಳ್ಳ ತುಂಬಿಹರಿದಿದೆ. ಹಳ್ಳದ ಹತ್ತಿರವಿರುವ 20 ಮೇಕೆಗಳು ನೀರುಪಾಲಾಗಿವೆ. ನೀರುಪಾಲಾದ 20 ಮೇಕೆಗಳಲ್ಲಿ 5 ಮೇಕೆಗಳನ್ನು ರಕ್ಷಿಸಲಾಗಿದ್ದು, ಅವು 5 ಮೇಕೆಗಳು ಕೂಡಾ ಸಾವನ್ನಪ್ಪಿವೆ ಎಂದು ಎಮ್ಮಿಗನೂರು ಪಶುವೈದ್ಯಾಧಿಕಾರಿ ಬಸವರಾಜ್ ರವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗುತ್ತಿಗನೂರು ಗ್ರಾಮದ  ಗ್ರಾಮಲೆಕ್ಕಾಧಿಕಾರಿ ಎಸ್.ಕೊಟ್ರೇಶ ಹಾಗು ಇತರರು ಇದ್ದರು.
ಶಾಲೆಗೆ ನುಗ್ಗಿದ ನೀರು ; ರಾತ್ರಿ ಸುರಿದ ಅತಿಯಾದ ಮಳೆಯಿಂದ ಗುತ್ತಿಗನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದ ಹೆಚ್ಚುವರಿ ನೀರು ಗುತ್ತಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ನೀರು ನುಗ್ಗಿದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಜೊತೆಗೆ ಈಶಾನ್ಯದಿಕ್ಕಿನಲ್ಲಿರುವ ಶಾಲೆಯ ಕಟ್ಟಡಗಳು ಮಳೆಯಿಂದಾಗಿ ಶಿಥಿಲಾವ್ಯಸ್ಥೆಯನ್ನು ತಲುಪಿದ್ದು, ವಿದ್ಯಾರ್ಥಿಗಳು ಭಯದಿಂದ ವಿದ್ಯಾಬ್ಯಾಸ ಮಾಡುತ್ತಿದ್ದಾರೆ ಎಂದು ಗುತ್ತಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅದ್ಯಕ್ಷ ಚೆಟ್ನಳ್ಳಿಶರಣ ಹಾಗು ಶಿಕ್ಷಕ ಡಿ.ಶ್ರೀನಿವಾಸ್ ನೊಂದು ನುಡಿದಿದ್ದಾರೆ.

Attachments area