ಮಳೆ ಅವಾಂತರಕ್ಕೆ ಮೂವರು ಬಲಿ

ಕಲಬುರಗಿ,ಜು.25-ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಎಡೆಬಿಡೆದ ಸುರಿಯುತ್ತಿರುವ ಮಳೆಗೆ ಓರ್ವ ಮಹಿಳೆ, ಒಬ್ಬ ಯುವಕ ಮತ್ತು ಎತ್ತೊಂದು ಬಲಿಯಾಗಿದ್ದು, ನೆರೆಯ ಬೀದರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದು ಜೇವರ್ಗಿ ತಾಲ್ಲೂಕಿನ ಬಿರಾಳ್ (ಬಿ) ಗ್ರಾಮದಲ್ಲಿ ಬಸಮ್ಮ ಬಸವರಾಜ ಎಂಬ ಮಹಿಳೆ ಮೃತಪಟ್ಟಿದ್ದು, ಅವರೊಂದಿಗಿದ್ದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಇನ್ನು ಹೊಲದಿಂದ ಮನೆಗೆ ಬರುತ್ತಿದ್ದಾಗ ಜಮೀನಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿ ತಗಲಿ ಯುವಕ ಮತ್ತು ಎತ್ತು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ ಹೆಗಲೇರಿ (24) ಎಂಬ ಯುವಕ ಮತ್ತು ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಹೊಲದಿಂದ ಮನೆಗೆ ಬರುತ್ತಿದ್ದಾಗ ಹಳ್ಳ ದಾಟಲು ಹೋಗಿ ಮಲ್ಲಪ್ಪ ಕರೆಪ್ಪಗೋಳ (25) ಎಂಬ ಯುವಕ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಧನ್ನೂರ್ (ಆರ್) ಗ್ರಾಮದಲ್ಲಿ ನಡೆದಿದೆ.

ಮನೆ ಗೋಡೆ ಕುಸಿದು ಮಹಿಳೆ ಸಾವು
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಯೋರ್ವಳು ಮೃತಪಟ್ಟಿರೋ ಘಟನೆ ಜೇವರ್ಗಿ ತಾಲೂಕಿನ ಬಿರಾಳ್ (ಬಿ) ಗ್ರಾಮದಲ್ಲಿ ನಡೆದಿದೆ. ಗ್ರಾಮದ 35 ವರ್ಷದ ಬಸಮ್ಮ ಮೃತ ಮಹಿಳೆ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರನೆ ಮನೆ ಗೋಡೆ ಬಿದ್ದಿದ್ದು, ಬಸಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮೃತ ಮಹಿಳೆಯೊಂದಿಗೆ ಮಗು ಕೂಡ ಇದ್ದು, ಅದೃಷ್ಟವಶಾತ್ ಪಾರಾಗಿದೆ. ಮೃತ ಬಸಮ್ಮ ಅವರ ಮನೆ ಮಣ್ಣು ಮತ್ತು ಕಲ್ಲಿನಿಂದ ನಿರ್ಮಾಣ ಮಾಡಲಾಗಿತ್ತು. ನಿರಂತರ ಮಳೆಯಿಂದ ಗೋಡೆ ತೇವಗೊಂಡು, ಕುಸಿದು ಬಿದ್ದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಜೇವರ್ಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಹೆಚ್ಚಿನ ಮಳೆ ಸುರಿತ್ತಿದೆ. ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ 35.6 ಮಿಲಿ ಮೀಟರ್ ಆಗಬೇಕಿತ್ತು. ಆದರೆ ಜಿಲ್ಲೆಯಲ್ಲಿ 138 ಮಿಲಿ ಮೀಟರ್ ಮಳೆಯಾಗಿದೆ. ಸರಿಸುಮಾರು 288 ರಷ್ಟು ಮಳೆ ಹೆಚ್ಚಾಗಿದೆ.
ಜೂನ್ ಮತ್ತು ಜುಲೈ ಆರಂಭದ ದಿನಗಳಲ್ಲಿ ಮಳೆಯಾಗಿರಲಿಲ್ಲಾ. ಹೀಗಾಗಿ ಬರದ ಕಾರ್ಮೋಡ ಕವಿದಿತ್ತು. ಆದರೆ ಜುಲೈ 15 ರಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಜೊತೆಗೆ ಅನೇಕರ ಆತಂಕವನ್ನು ಹೆಚ್ಚಿಸಿದೆ.
ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ರೈತನ ಜೊತೆ ಎತ್ತು ಬಲಿ

ಯುವಕ, ಎತ್ತು ಬಲಿ
ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಯುವ ರೈತ ಹಾಗೂ ಎತ್ತು ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದಲ್ಲಿ ನಡೆದಿದೆ. ಬಸವರಾe ಹೆಗಲೇರಿ (24) ಎಂಬ ಯುವಕ ಹಾಗೂ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಸಂಜೆ ಜಮೀನಿನಿಂದ ಮನೆಗೆ ಬರುವಾಗ ಜಮೀನಿನಲ್ಲಿ ಜೋತುಬಿದ್ದ ವಿದ್ಯುತ್ ತಂತಿಗೆ ಬಾರುಕೋಲು ತಗುಲಿ ಘಟನೆ ಸಂಭವಿಸಿದೆ. ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ ವರದಿ:

ಹಳ್ಳದಲ್ಲಿ ಕೊಚ್ಚಿ ಹೋದ ಯುವಕ
ಹಳ್ಳ ದಾಟಲು ಹೋದ ಯುವಕನೊಬ್ಬ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಧನ್ನೂರ್ (ಆರ್) ಗ್ರಾಮದಲ್ಲಿ ನಿನ್ನೆ ಸಾಯಂಕಾಲ ನಡೆದಿದೆ.
ಮಲ್ಲಪ್ಪ ಕರೆಪ್ಪಗೋಳ (25) ಎಂಬ ಯುವಕ ಹೊಲದಿಂದ ಮನೆಗೆ ಬರುತ್ತಿದ್ದಾಗ ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಯುವಕನ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.