ಮಳೆ ಅಬ್ಬರ: ಗುರಮ್ಮನಕಟ್ಟೆ ಒಡೆಯುವ ಭೀತಿ

ಮಧುಗಿರಿ, ಆ. ೪- ಕಸಬಾ ವ್ಯಾಪ್ತಿಯ ಗುರಮ್ಮನಕಟ್ಟೆ ಕೆರೆ ತುಂಬಿದ್ದು, ಕೋಡಿ ಹರಿಯುವ ಸ್ಥಳದಲ್ಲಿ ಮಣ್ಣು ಬಂಡೆ ಬಿದ್ದಿರುವುದರಿಂದ ನೀರು ಸರಾಗವಾಗಿ ಹರಿಯದ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆ ಒಡೆದು ಹೋಗಬಹುದು ಎಂಬ ಭೀತಿಯಿಂದ ನೀರು ಸರಾಗವಾಗಿ ಹರಿಯುವಂತೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ .
ಈ ಕೆರೆಗೆ ಸಂಬಂಧಿಸಿದ ಅಚ್ಚುಕಟ್ಟುದಾರರಿಗೆ ತೊಂದರೆಯಾಗುತ್ತಿದ್ದು, ಕೆಲವರು ಕೆರೆಯ ಸ್ಥಳ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಗ್ರಾಮಸ್ಥರು ಮತ್ತು ರೈತರು ಹಲವಾರು ಬಾರಿ ಮನವಿ ಮಾಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮಂಗೆ ಬಿದ್ದಿದ್ದು, ನೀರು ಸರಾಗವಾಗಿ ಹರಿಯುವಂತೆ ಮಾಡದಿದ್ದ ಪಕ್ಷದಲ್ಲಿ ನಂಜುಂಡೇಶ್ವರ ದೇವಾಲಯದವರೆವಿಗೂ ನೀರು ಹರಿದು ಮುಳುಗಡೆ ಪ್ರದೇಶವಾಗುವ ಸಂಭವ ಹೆಚ್ಚಾಗಿದೆ ಮತ್ತು ಗೊಲ್ಲರ ಹಟ್ಟಿಗೂ ತೊಂದರೆಯಾಗಲಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.