ಮಳೆ ಅನಾಹುತ: ಕಚ್ಚಾ ಮನೆಗಳ ಮಂಜೂರಿಗೆ ಮನವಿ

ತುಮಕೂರು, ಆ. ೫- ಪ್ರವಾಹ ಪೀಡಿತ ಮತ್ತು ಭಾರೀ ಮಳೆಯಿಂದ ಅನಾಹುತವಾಗಿರುವ ಮನೆಗಳಿಗೆ ತುರ್ತಾಗಿ ಕಚ್ಚಾ ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಹೆಚ್.ಶಿವಕುಮಾರ್ (ಬಂಡೆ ಕುಮಾರ್), ಗೋವಿಂದರಾಜು ಕೆ., ಯೋಗೀಶ್ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತುರ್ತಾಗಿ ಕಚ್ಚಾ ಮನೆಗಳನ್ನು ಮಂಜೂರು ಮಾಡುವಂತೆ ಕೋರಿದರು.
ಸುಮಾರು ೧ ತಿಂಗಳುಗಳಿಂದ ಭಾರೀ ಮಳೆ ಗಾಳಿಯಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರಾಜ್ಯದಲ್ಲಿ ಜನಸಾಮಾನ್ಯರ, ಬಡವರ ಮನೆಗಳು ರಾಜ್ಯದಲ್ಲಿ ಅನಾಹುತಗಳಿಗೆ ಬಿದ್ದು ಹಾನಿ ಸಂಭವಿಸಿದೆ. ನಾವು ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಾಗ ಸದರಿ ವಿಷಯಗಳು ನಮ್ಮ ಗಮನಕ್ಕೆ ಬಂದಿದ್ದು, ನಮ್ಮ ಸಂಘಟನೆ ವತಿಯಿಂದ ಸಹಾಯ ಸಹ ಮಾಡಲಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಬಡವರು, ದೀನದಲಿತರು ಮನೆಗಳಿಗೆ ಆಶ್ರಯದಾತರಾಗಿ ಭಾರೀ ಮಳೆ ಗಾಳಿ, ಅತಿವೃಷ್ಟಿ ಅನಾವೃಷ್ಟಿಯಿಂದ ವಾಸದ ಮನೆಗಳನ್ನು ಕಳೆದುಕೊಂಡಿರುವ ಜನಸಾಮಾನ್ಯರಿಗೆ ತುರ್ತಾಗಿ ಕಚ್ಚಾ ಮನೆಗಳನ್ನು ಮಂಜೂರು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾವುಗಳು ಆದೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.