ಮಳೆಹಾನಿ : ಸಚಿವ ಬೈರತಿ ಪರಿಶೀಲನೆ

ಕೆ.ಆರ್.ಪುರ,ನ.೬-ಕೆ.ಆರ್.ಪುರ ಕ್ಷೇತ್ರದ ಎ.ನಾರಾಯಣಪುರ ವಾಡ್೯ನ ಪೈಲೇಔಟ್‌ನ ಮಳೆಹಾನಿ ಪ್ರದೇಶಗಳಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಮತ್ತು ಸಚಿವ ಬೈರತಿ ಬಸವರಾಜ್ ಭೇಟಿನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಅವರು, ಮಳೆ ನೀರು ಸಮರ್ಪಕವಾಗಿ ಹರಿಯದೆ ಮನೆಗಳಿಗೆ ನೀರು ನುಗ್ಗಿದೆ. ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರೈಲ್ವೆ ಹಳಿಯ ಕೆಳಗೆ ಬೃಹತ್ ರಾಜಕಾಲುವೆ ನಿರ್ಮಾಣ ಮಾಡುವ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆಂದು ನುಡಿದರು.

ಮಹದೇವಪುರ ಹಾಗೂ ಪೂರ್ವ ವಲಯದ ಅಧಿಕಾರಿಗಳ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದು,ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಶ್ರೀಘ್ರ ಕಾರ್ಯ ಮಾಡುವುದಾಗಿ ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು, ಆಯುಕ್ತರು ಹಾಗೂ ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕ್ಷೇತ್ರದ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತದೆ ಎಂದು ನುಡಿದರು.

ಪರಿಶೀಲನೆ ವೇಳೆ ಮಾಜಿ ಪಾಲಿಕೆ ಸದಸ್ಯ ಸುರೇಶ್, ವಲಯ ಜಂಟಿ ಆಯುಕ್ತ ವೆಂಕಟಚಲಪತಿ, ಎಇ ಗುರು, ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿಚಿತ್ರ:ಕೆ.ಆರ್.ಪುರ ಕ್ಷೇತ್ರದ ಎ.ನಾರಾಯಣಪುರ ವಾಡ್೯ನ ಪೈಲೇಔಟ್‌ನ ಮಳೆಹಾನಿ ಪ್ರದೇಶಗಳಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಮತ್ತು ಸಚಿವ ಬೈರತಿ ಬಸವರಾಜ್ ಭೇಟಿನೀಡಿ ಪರಿಶೀಲನೆ ನಡೆಸಿದರು.