ಮಳೆಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ ಪರಿಶೀಲನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ನ 21 : ಕಳೆದ ಹಲವು ದಿನಗಳಿಂದ ನಿನ್ನೆ ರಾತ್ರಿವರೆಗೆ ಬಿದ್ದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ 36 ನೇ ವಾರ್ಡಿನ ಕೆಎಸ್ ಆರ್ ಟಿಸಿ ಬಸ್ ಡಿಪೋ ಹಿಂಭಾಗದ ಪ್ರದೇಶದ, ಕಪ್ಪಗಲ್ಲು ರಸ್ತೆ  ಸೇರಿದಂತೆ ಅನೇಕ ಪ್ರದೇಶದಲ್ಲಿ ಮನೆಗಳು ಕುಸಿದು ಬಿದ್ದಿರುವುದು, ಮನೆಗಳಿಗೆ ನೀರು ನುಗ್ಗಿ ಹಾಳಾಗಿರುವುದನ್ನು ಕಂಡು ಮರುಗಿದರು. ಸಂತ್ರಸ್ತರಿಗೆ ದೈರ್ಯ ಹೇಳಿ ಸೂಕ್ತ ವ್ಯವಸ್ಥೆ ಮಾಡಲು ಪಾಲಿಕೆಗೆ  ಅಧಿಕಾರಿಗಳಿಗೆ ಸೂಚಿಸಿದರು.  ಮಬೆ ಬಿದ್ದವರಿಗೆ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.