ಮಳೆಹಾನಿ : ಪರಿಹಾರಕ್ಕೆ ಆಗ್ರಹ

ಅಣ್ಣಿಗೇರಿ, ಸೆ 3: ನಲವಡಿ ಹತ್ತಿರ ರಾಡಿಹಳ್ಳ ಅಪಾರ ಪ್ರಮಾಣದ ನೀರು ಬಂದು ಪ್ರವಾಹವಾಗಿ ಹಳ್ಳದ ಸುತ್ತ ಮುತ್ತಲಿನ ರೈತರ ಜಮಿನುಗಳಿಗೆ ನುಗ್ಗಿ, ಬೆಳೆದು ನಿಂತ ಪೈರು ಕೂಚ್ಚಿ ಹೊಗುವದಲ್ಲದೆ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೂಡಾ ಕೊಚ್ಚಿ ಹೋಗುವಂತಾಗಿದೆ.
ಈಗಾಗಲೇ ಮೂರು ದಿನಗಳಿಂದ ಸುರಿದ ಮಳೆಯಿಂದ ನೂರಾರು ಎಕರೆ ಬೆಳೆದಂತಹ ಬೆಳೆ ಸಂಪೂರ್ಣವಾಗಿ ಹಾನಿಯಾಗಿದ್ದು ಇದುವರೆಗೂ ಯಾವುದೇ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಬರದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ತುಪ್ಪರಿ ಹಳ್ಳವನ್ನು ಅಂದಾಜು 350 ಕೋಟಿ ರೂ. ಕ್ರೀಯಾಯೋಜನೆ ಮಾಡಿ ಅಭಿವೃದ್ಧಿ ಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ರಾಡಿ ಹಳ್ಳವನ್ನು ಅದೇ ಮಾದರಿಯಲ್ಲಿ ಸಚಿವರು ಅಭಿವೃದ್ಧಿ ಪಡಿಸಬೇಕೆಂದು ರಾಡಿಹಳ್ಳ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರದೀಪ ಲೆಂಕನಗೌಡ್ರ ಆಗ್ರಹಿಸಿದ್ದಾರೆ.
ಅಲ್ಲದೆ ಎನ್‍ಡಿಆರ್‍ಎಫ್ ತಂಡವನ್ನು ರಾಡಿಹಳ್ಳದ ಪರಿಸರದಲ್ಲಿ ಹಾನಿ ಆದ ಬಗ್ಗೆ ಸರ್ವೇ ಮಾಡಲು ಕಳಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರಾದ ಹೇಮಣ್ಣ ಮಂಟೂರ್, ದೇವನಗೌಡ ದೊಡ್ಡಗೌಡರ್ ಅರುಣ್ ಪಾಟೀಲ್ ಮತ್ತಿತರರಿದ್ದರು.