ಮಳೆಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ,ಜು 24: ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಾನಿಗೆ ಒಳಗಾದ ರಸ್ತೆ, ಚರಂಡಿ, ಸೇತುವೆ ಮತ್ತು ಮನೆಗಳನ್ನು ಪರಿಶೀಲಿಸಲು ಭಾನುವಾರ ಶಾಸಕÀ ಡಾ. ಶೈಲೇಂದ್ರ ಬೆಲ್ದಾಳೆ ಅವರು ಗ್ರಾಮಗಳಿಗೆ
ಭೇಟಿ ನೀಡಿದರು. ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದ ಅವರು, ಆದಷ್ಟು ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಬೀದರ್ ದಕ್ಷಿಣ ಕ್ಷೇತ್ರದ ತಡಪಳ್ಳಿ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು ಹಾಗೂ ಸಿಂದೋಲ ಭಂಗುರ ರಸ್ತೆ ನಡುವೆ ಇರುವ ಸೇತುವೆ ವೀಕ್ಷಿಸಿದರು. ಸಿಂದೋಲ ಬಳಿಯ ಸೇತುವೆ ಸಮಸ್ಯೆ ಜನರು ಶಾಸಕರಿಗೆ ತಿಳಿಸಿ ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಅವರು, ಹಿಂದೆ ಏನಾಗಿದೆ ಎನ್ನುವುದು ಬೇಡ. ಈಗ ಸಮಸ್ಯೆ ಪರಿಶೀಲನೆ ಮಾಡಿದ್ದೇವೆ. ಕೂಡಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮನವರಿಕೆ ಮಾಡಿದರು. ರಾತ್ರಿ ಎರಡು ಗಂಟೆವರೆಗೂ ಕಷ್ಟ ಅನುಭವಿಸಿದ್ದೇವೆ ಎಂದು ಸೇತುವೆ ಬಳಿ ಸಾರ್ವಜನಿಕರು ಅಳಲು ತೋಡಿಕೊಂಡರು ನೋವು ಆಲಿಸಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದರು.
ವಿಪರೀತ ಮಳೆಯಿಂದಾಗಿ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ಸಾಕಷ್ಟು ನಷ್ಟ ಸಂಭವಿಸಿದೆ. ಮಳೆಯಿಂದ ಹಾನಿಗೀಡಾಗಿರುವ ವಸ್ತುಗಳ ಹಾಗೂ ರಸ್ತೆ, ಸೇತುವೆ ಚರಂಡಿ ಇತರೆ ಮಾಹಿತಿಗಳನ್ನು ಕಲೆಹಾಕಿ, ನಷ್ಟದ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಇಇ ಭಗವಾನ ಸಿಂಗ್ ಪಿಡಿಒ ಸುನೀತಾ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.