ಮಳೆಯ ಪ್ರಭಾವ ನಾರಿಹಳ್ಳದ ನೀರಿನ ಹರಿವು ಹೆಚ್ಚಳ


ಸಂಜೆವಾಣಿ ವಾರ್ತೆ
ಸಂಡೂರು, ಮೇ.27:  ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಸೇರಿದಂತೆ ಹೋಬಳಿಯ ಕುರೇಕುಪ್ಪೆ, ವಡ್ಡು, ತಾಳೂರು, ಜೋಗ, ಬನ್ನಿಹಟ್ಟಿ ನಾಗಲಾಪುರ ಹಲವಾರು ಗ್ರಾಮಗಳಲ್ಲಿ ತಡರಾತ್ರಿ ಗುಡುಗು ಸಿಡಿಲು ಗಾಳಿ ಸಹಿತ ಉತ್ತಮ ಮಳೆಯ ಪ್ರಭಾವದಿಮದ ರೈತಾಪಿ ಜನತೆಗೆ ಸಂತಸಗೊಂಡಿದ್ದಾರೆ. ಕುರೇಕುಪ್ಪ ಪಟ್ಟಣದಲ್ಲಿ 4.7 ಸೆಂ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಉತ್ತಮ ಮಳೆಯಿಂದಾಗಿ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ರೈತಭಾಂದವರು ಭೂಮಿಯನ್ನು ಹದಗೊಳಿಸಿ ವಿವಿಧ ಬೆಳೆಗಳ ಬೆಳಗೆ ಬಿತ್ತನೆ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದಾರೆ. ಮಳೆ ರಭಸವಾದ ಗಾಳಿ ಸಹಿತ ವರುಣದೇವನ ಕೃಪಾಕಟಾಕ್ಷದೊರೆತಿದ್ದು ವಡ್ಡು ಗ್ರಾಮದ ಕೆಲ ಸ್ಥಳಗಳಲ್ಲಿ ಬೇವಿನ ಮರಗಳು ನೆಲಕ್ಕೆ ಉರುಳಿಬಿದ್ದಿವೆ. ನಾರೀಹಳ್ಳದ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಕೆರೆಕುಂಟೆ ಚೆಕ್ ಡ್ಯಾಂ ಸೇರಿದಂತೆ ಇತರೆ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ಸನ್ಣ ಪ್ರಮಾಣದಲ್ಲಿ ಸಂಗ್ರಹವಾಗಿದ್ದರಿಂದ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.