ಮಳೆಯ ನರ್ತನ ಹಾಗೂ ಡೋಣಿ ನದಿ ಪ್ರವಾಹಕ್ಕೆ ಜನಜೀವನ ಅಸ್ತವ್ಯಸ್ಥ!

ಜಿ.ಪಿ. ಘೋರ್ಪಡೆ

ತಾಳಿಕೋಟೆ:ಸೆ.12: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆರಾಯನ ನರ್ತನದಿಂದ ಜನ ಜಾನುವಾರುಗಳು ತತ್ತರಿಸುತ್ತಿದ್ದರೆ ಕೆಲವೆಡೆ ಜನ ಜೀವನ ಅಕ್ಷರಶಃ ಅಸ್ತವ್ಯಸ್ಥಗೊಂಡಿದೆ. ಇನ್ನೂ ಡೋಣಿ ನಧಿಯ ಪ್ರವಾಹಕ್ಕೆ ಸೇತುವೆಗಳು ಜಲಾವೃತಗೊಂಡಿದ್ದು ಜನರು ವಾಹನ ಸವಾರರು ಪರದಾಡುವಂತೆ ಮಾಡಿದೆ.

   ತಾಳಿಕೋಟೆ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಅನ್ನದಾತನ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡಿದೆ ವಿಪರೀತ ಮಳೆಯಿಂದ ಬಿತ್ತನೆ ಮಾಡಿದ ತೊಗರಿ, ಹತ್ತಿ, ಕಬ್ಬು, ನುಗ್ಗೆ ಅಲ್ಲದೇ ಇನ್ನಿತರ ವಾಣಿಜ್ಯ ಬೆಳೆಗಳು ಕೈಗಟುಕದಂತೆ ಮಾಡಿದೆ, ಬಿತ್ತನೆ ಮಾಡಿದ ಬೆಳೆಗಳೆಲ್ಲವೂ ನೇಟೆರೋಗಕ್ಕೆ ತುತ್ತಾಗುವ ಲಕ್ಷಣಗಳು ಬಹುತೇಕ ಕಂಡುಬಂದಿದ್ದು ಕೆಲವು ರೈತರ ಜಮೀನುಗಳಲ್ಲಿಯ ಒಡ್ಡುವಾರಿಗಳು ಒಡೆದು ಹೋಗಿವೆ ಇನ್ನೂ ಕೆಲವು ರೈತರ ಜಮೀನುಗಳಲ್ಲಿಯ ಬೆಳೆಗಳು ನೀರಿನಲ್ಲಿ ತೇಲುತ್ತಿವೆ.
    ಇನ್ನೂ ಡೋಣಿ ನಧಿಯ ಪ್ರವಾಹದಿಂದ ತಾಲೂಕಿಗೆ ಸಂಬಂದಿಸಿದ ಮೂಕೀಹಾಳ, ಹರನಾಳ, ಕಲ್ಲದೇವನಹಳ್ಳಿ, ಬೋಳವಾಡ, ಬೊಮ್ಮನಹಳ್ಳಿ, ತಾಳಿಕೋಟೆ ಸೀಮೆಗೆ ಒಳಪಡುವ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ನೀರಿನ ರಬಸಕ್ಕೆ ಜಮೀನಿನಲ್ಲಿಯ ಬೆಳೆ ಮತ್ತು ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ ನೂರಾರು ಏಕರೆ ಪ್ರದೇಶದ ಬಹುತೇಕ ಬೆಳೆಗಳು ನೀರು ಪಾಲಾಗುವದರ ಜೊತೆಗೆ ಜಮೀನುಗಳು ಸಹ ಮತ್ತೆ ಬಿತ್ತನೆ ಮಾಡಲಾರದ್ದಂತಹ ಪರಸ್ಥಿತಿ ಬಂದೊದಗಿದೆ.
    ಬಹುತೇಕ ಜಮೀನುಗಳಲ್ಲಿ ಈಗಾಗಲೇ ಉತ್ತಮ ಮಳೆಯಾಗಿದೆ ಬಿತ್ತನೆ ಮಾಡಿದ ಹತ್ತಿ, ತೋಗರಿ, ಸೂರ್ಯಕಾಂತಿ, ಅಲಸಂದಿ, ನುಗ್ಗೆ ಅಲ್ಲದೇ ಕಬ್ಬು ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿಕೊಂಡು ಉತ್ತಮ ಫಸಲು ಪಡೆಯುವ ಆಶಾಭಾವನೆಯಲ್ಲಿದ್ದ ರೈತರಿಗೆ ಡೋಣಿ ನಧಿಯ ವರುಣನ ಅಬ್ಬರಕ್ಕೆ ಸಂಪೂರ್ಣ ಜಲಾವೃತಗೊಂಡಿದ್ದು ಉತ್ತಮ ಫಸಲಿನ ಆಶಾಭಾವನೆಯಲ್ಲಿದ್ದ ರೈತರಿಗೆ ಬರಸಿಡಿಲು ಬಡೆದಂತಾಗಿದೆ.

ಎರಡು ದಿನದಿಂದ ಜಲಾವೃತವಾದ ಸೇತುವೆಗಳು

  ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಭಾರಿ ರಬಸದ ಮಳೆಗೆ ಡೋಣಿ ನಧಿಯು ಹಾಗೂ ಸೋಗಲಿ ಹಳ್ಳವು ಕಳೆದ ಎರಡು ದಿನಗಳಿಂದ ಅಬ್ಬರಿಸುತ್ತಿದ್ದು ಉಕ್ಕಿ ಹರಿಯುತ್ತಿರುವ ನೀರಿನ ಪ್ರವಾಹಕ್ಕೆ ವಿಜಯಪೂರ ರಸ್ತೆಯ ಕೆಳಮಟ್ಟದ ಸೇತುವೆ ಹಾಗೂ ಹಡಗಿನಾಳ ಮಾರ್ಗದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ಸಂಪೂರ್ಣ ಸಂಪರ್ಕ ಕಡಿತ

ಡೋಣಿ ನಧಿಯ ಭಾರಿ ಪ್ರವಾಹ ಅಬ್ಬರಿಸುತ್ತಿದ್ದು ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಿಜಯಪೂರ, ಮುದ್ದೇಬಿಹಾಳ ಮಾರ್ಗದ ಕಡೆಯ ಸಂಪರ್ಕವು ಸಂಪೂರ್ಣ ಕಡಿತಗೊಂಡಿದೆ ಈ ಪ್ರವಾಹದಿಂದ ಸೇತುವೆ ಜಲಾವೃತವಾಗಿರುವದನ್ನು ಅರೀಯದೇ ಬಂದ ಗೂಡ್ಸ್ ವಾಹನಗಳು ಸಾಲುಗಟ್ಟಿ ನಿಂತಿದ್ದರೆ ಇನ್ನೂ ವಿಜಯಪೂರ ಭಾಗದ ಕಡೆಯಿಂದ ಬಂದ ಕೆಲವರು ಸುಮಾರು 70 ಕೀಲೋ ಮೀಟರ್ ಅಂತರದ ದೇವರ ಹಿಪ್ಪರಗಿ ಮೂಲಕ ತಾಳಿಕೋಟೆ ಪಟ್ಟಣದ ಸಂಪರ್ಕವನ್ನು ಪಡೆದುಕೊಂಡರೆ ಮುದ್ದೇಬಿಹಾಳ ಭಾಗದಿಂದ ಬರುವ ಜನರು ನಾಲತವಾಡ, ನಾರಾಯಣಪೂರ, ಕೊಡೇಕಲ್ಲ ಮಾರ್ಗವಾಗಿ ತಾಳಿಕೋಟೆ ಪಟ್ಟಣವನ್ನು ಸೇರಿಕೊಂಡಿದ್ದಾರೆ.

ಕೊಚ್ಚಿಕೊಂಡು ಹೋದ ನೂತನ ಸೇತುವೆ

ಮೂಕೀಹಾಳ ಗ್ರಾಮದ ಹತ್ತಿರ ಸೋಗಲಿ ಹಳ್ಳಕ್ಕೆ ನೂತನವಾಗಿ 1 ತಿಂಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯು ಹಳ್ಳದ ಪ್ರವಾಹಕ್ಕೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ ಈ ಹಿಂದೆ ನಿರ್ಮಿಸಿದ್ದ ಹಳೆಯ ಸೇತುವೆಯು ಹಳ್ಳದಲ್ಲಿ ಎಷ್ಟೇ ಪ್ರವಾಹ ಬಂದರೂ ಕೂಡಾ ಕೊಚ್ಚಿಕೊಂಡು ಹೋಗಿದ್ದಿಲ್ಲಾ ಆದರೆ ಹೊಸ ಸೇತುವೆ ನಿರ್ಮಿಸಿ ತಿಂಗಳಲ್ಲಿಯೇ ಕೊಚ್ಚಿಕೊಂಡು ಹೋಗಿರುವದು ಅಧಿಕಾರಿಗಳ ಮೇಲೆ ಕಾಮಗಾರಿ ಮಾಡಿದ ಗುತ್ತಿಗೆದಾರನ ಮೇಲೆ ಅನುಮಾನ ಹುಟ್ಟಿಸುವಂತೆ ಮಾಡಿದೆ.

ಮೇಲ್ಮಟದ ಸೇತುವೆ ನಿರ್ಮಾಣವಾಗಲಿ

ವಿಜಯಪೂರಕ್ಕೆ ತೆರಳು ರಸ್ತೆಯ ಡೋಣಿ ನಧಿಗೆ ಈ ಹಿಂದೆ ನಿರ್ಮಿಸಲಾಗಿರುವ ಮೇಲ್ಮಟ್ಟದ ಸೇತುವೆ ಕುಸಿಯುವ ಹಂತಕ್ಕೆ ಬಂದಿರುವದರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಸದರಿ ಮೇಲ್ಮಟ್ಟದ ಸೇತುವೆ ಪಕ್ಕದಲ್ಲಿದ್ದ ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ಕೆಳಮಟ್ಟದ ಸೇತುವೆಯು ನಧಿಯ ಪ್ರವಾಹದಿಂದ ಜಲಾವೃತಗೊಂಡಿದ್ದರಿಂದ ಜನರಿಗೆ ವಿಜಯಪೂರ ಮತ್ತು ಮುದ್ದೇಬಿಹಾಳ ಮಾರ್ಗಕಡೆಗೆ ಹೋಗಲು ಪರ್ಯಾಯ ಮಾರ್ಗವಿಲ್ಲದೇ ಪರಿತಪಿಸುವಂತಾಗಿದೆ ಕೂಡಲೇ ಮೇಲ್ಮಟ್ಟದ ಸೇತುವೆಯನ್ನು ತೀರ್ವಗತಿಯಲ್ಲಿ ನಿರ್ಮಿಸಬೇಕು ಇಲ್ಲದಿದ್ದರೆ ದುರಸ್ಥಿಗೊಳಿಸುವಂತಹ ಕಾರ್ಯವಾದರೂ ಮಾಡಿ ವಾಹನ ಸಂಚಾರಕ್ಕೆ ಜನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.