ಮಳೆಯ ನಡುವೆಯೂ ಪಾದಯಾತ್ರೆ ಬೆಳೆಸಿದ ಭಕ್ತರು

ಬೀದರ್:ಸೆ.11:ತಾಲೂಕಿನ ಔರದ (ಎಸ್) ಗ್ರಾಮದಿಂದ ರೆಕುಳಗಿಯ ಪವಾಡಪುರುಷ ಶಂಭುಲಿಂಗೇಶ್ವರ ಶಿವಶರಣೆ ಬಸ್ಸಮ್ಮತಾಯಿಯ ದರ್ಶನಕ್ಕೆ ಮಂತ್ರಮಹರ್ಷಿ ಶ್ರೀ ಸದ್ಗುರೂಜಿ ಡಾ: ಎನ್ ಬಿ.ರೆಡ್ಡಿ ಭಕ್ತಾಧಿಗಳು ಪಾದಯಾತ್ರೆ ಕೈಗೊಂಡರು.

ಜಿಲ್ಲೆಯ ಗ್ರಾಮಗಳಿಂದಲೂ ಹಾಗೂ ಹೊರರಾಜ್ಯದಿಂದ ಲಕ್ಷಾಂತರ ಜನರು ದರ್ಶನಕ್ಕೆ ಭಕ್ತಾಧಿಗಳು ಪಾದಯಾತ್ರೆ ಕೈಗೊಂಡರು ಔರದ ಎಸ್ ಬೈರನಹಳ್ಳಿ ಬಗ್ದಲ್ ಮನ್ನಾಖೇಳಿ ಬಂಬಳಗಿ ನಿಡುವಂಚಿ ಗ್ರಾಮಗಳ ಮೂಲಕ ಭಕ್ತರು ಪಾದಯಾತ್ರೆ ಬೆಳೆಸಿದರು.

ದಾರಿಯುದ್ದಕ್ಕೂ ಸಾಂಸ್ಕøತಿಕ ಕಲಾ ತಂಡಗಳು ಗಮನ ಸೆಳೆದರೆ ಭಕ್ತಾದಿಗಳು ಪಾದಯಾತ್ರಾರ್ಥಿಗಳಿಗೆ ಹಣ್ಣು ಕಾಯಿ ಪ್ರಸಾದ ವ್ಯವಸ್ಥೆ ಕಲಿಸಲಾಗಿತ್ತು.

ಶಂಭುಲಿಂಗೇಶ್ವರ ಬಸಮ್ಮ ತಾಯಿಯ ದರ್ಶನ ಪಡೆಯಲು ಚಳಿ, ಮಳೆ, ಗಾಳಿ ಲೆಕ್ಕಿಸದೆ ಪಾದಯಾತ್ರೆ
ಬೆಳೆಸಿದರು

ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಮಂದಿರಕ್ಕೆ ವಿವಿಧ ಬಣ್ಣ ಬಣ್ಣ, ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತವಾದ ಮಂದಿರದಲ್ಲಿ ಪವಾಡ ಪುರುಷ ಶಂಭುಲಿಂಗೇಶ್ವರ ಹಾಗೂ ಬಸಮ್ಮ ತಾಯಿಯವರ ಗದ್ದುಗೆಗೆ ವಿಶೇಷ ರುದ್ರಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪಾದಯಾತ್ರೆಗೆ ಕೆಎಸ್ ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ವೆಲ್ದಾಳೆ, ಕಾಂಗ್ರೆಸ್ ಮುಖಂಡ ಚಂದ್ರಸಿಂಗ ಕಾಂಗ್ರೆಸ್ ಯುವ ಮುಖಂಡ ಅಭಿಷೇಕ್ ಪಾಟೀಲ್ ಭದ್ರೆಶ್ವರ ಮಠದ ಶ್ರೀ ಶಿವಕುಮಾರ್ ಸ್ವಾಮಿ

ಜಿಲ್ಲಾಧಿಕಾರಿಗಳಾದ ಗೋವಿಂದ ರಡ್ಡಿ, ಎಸ್ ಪಿ ಕೀಶೋರ ಬಾಬು ಲೋಕೆಶ ಕನಶಟ್ಟಿ, ಕಿರಣ ಸ್ವಾಮಿ, ಸಚಿನ ಸ್ವಾಮಿ, ಚನುಮಲಪ್ಪ ಹಜ್ಜರಗಿ ಸಿದ್ದರಾಮಯ್ಯ ಹಿರೇಮಠ್ ಗ್ರಾಮಸ್ಥರು ಹಾಜರಿದ್ದರು.