ಮಳೆಯ ಕಾರಣ ಲಕ್ಷಾಂತರ ಮೌಲ್ಯದ ಈರುಳ್ಳಿ ನಾಶ

ಕೊಲ್ಹಾರ:ಜೂ.11: ತಾಲ್ಲೂಕಿನ ಕೂಡಗಿ ಗ್ರಾಮದಲ್ಲಿ ಮಳೆಯ ಅವಾಂತರಕ್ಕೆ ಇಬ್ರಾಹಿಂಸಾಬ ತಾಳಿಕೋಟಿ ಎನ್ನುವವರ ಲಕ್ಷಾಂತರ ಮೌಲ್ಯದ ಈರುಳ್ಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜರುಗಿದೆ.
ಮಳೆಯ ಆರ್ಭಟಕ್ಕೆ ಈರುಳ್ಳಿ ಸಂಗ್ರಹದ ಗೋದಾಮು ಕುಸಿದಿದೆ ಅಲ್ಲದೆ ಮನೆಯ ಗೋಡೆಯು ಕೂಡ ಕುಸಿದು ಬಿದ್ದಿದೆ ಅಂದಾಜು ಎರಡು ಲಕ್ಷ ಮೌಲ್ಯದ ಹಾನಿಯಾಗಿದೆ ಎಂದು ರೈತ ಇಬ್ರಾಹಿಂಸಾಬ ತಾಳಿಕೋಟಿ ತಮ್ಮ ಅಳಲು ತೋಡಿಕೊಂಡಿದ್ದಾರೆ.