ಮಳೆಯ ಆರ್ಭಟ ಹೊಸಪೇಟೆಯಲ್ಲಿ ಅವಘಡ-ಜಿಲ್ಲೆಯಲ್ಲಿ ಮಳೆಯ ಕಲರವ.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮೇ12: ಕಳೆದೆರಡು ದಿನಗಳ ಹಿಂದೆ ಸುರಿದಂತೆ ನಿನ್ನೆ ಶನಿವಾರ ರಾತ್ರಿಯೂ ಸಹ ಗುಡುಗು ಸಹಿತ ಅಬ್ಬರದ ಮಳೆ ಹೊಸಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ತಂಪಿನ ವಾತಾವರಣ ನಿರ್ಮಾಣ ಮಾಡಿದ್ದರೂ ರೈತರ ಬೆಳೆ ಹಾನಿ ಸೇರಿದಂತೆ ಸಣ್ಣಪುಟ್ಟ ಅವಘಡಗಳಿಗೆ ಕಾರಣವಾಗಿದೆ.
ವರ್ಷದ ಮೊದಲ ದೊಡ್ಡ ಮಳೆಯ ಹಿಂಬಾಲಿಸಿ ಬಂದಿರುವ ಈ ಎರಡನೇಯ ಮಳೆ ಜಿಲ್ಲೆಯ ಕೂಡ್ಲಗಿಯ ಹೊಸಹಳ್ಳಿ ವ್ಯಾಪ್ತಿ ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿ, ಮರಿಯಮ್ಮನಹಳ್ಳಿ, ಕಮಲಾಪುರ ಹೋಬಳಿಯ ಪ್ರದೇಶಗಳು ಸೇರಿದಂತೆ ಹೊಸಪೇಟೆಯ ಹೊಸೂರು, ಬಸವನದುರ್ಗಾ, ಚಿತ್ತವಾಡಗಿ, ಹಾನಗಲ್ಲ್, ಇಪ್ಪತೇರಿ, ಕರೆಕಲ್ಲ್,  ನರಸಾಪುರ ವ್ಯಾಪ್ತಿಯಲ್ಲಿಯು ಗುಡುಗು ಸಹಿತ ಬಾರಿ ಮಳೆಯಾಗಿದೆ. 
ಹೊಸಪೇಟೆಯ ಹೊಸೂರು, ಬಸವನದುರ್ಗಾ, ಚಿತ್ತವಾಡಗಿ, ಹಾನಗಲ್ಲ್, ಇಪ್ಪತೇರಿ, ಕರೆಕಲ್ಲ್,  ನರಸಾಪುರ ವ್ಯಾಪ್ತಿಯಲ್ಲಿಯು ಗುಡುಗು ಸಹಿತ ಬಾರಿ ಮಳೆ ರೈತರ ನೂರಾರು ಏಕರೆ ಪ್ರದೇಶದ ಬಾಳೆ, ಕಬ್ಬು ಮತ್ತು ಭತ್ತದ ಬಳೆ ಸೇರಿದಂತೆ ಅನೇಕ ಬೆಳೆಗಳ ಹಾನಿಗೆ ಕಾರಣವಾಗಿದೆ. ಗಾಳಿಯಿಂದಾಗಿ ಫಸಲು ಬಿಡುವ ಹಂತದ ಗಿಡಗಳು ನೆಲಕ್ಕುರುಳಿದವು.
ಹಂಪಿ ಪರಿಸರದ ರೈತರು ಪ್ರಾಚೀನ ಕಾಲುವೆಗಳನ್ನು ನಂಬಿ ಬಾಳೆ ಬೆಳೆಗಳತ್ತ ಹೆಚ್ಚಿನ ಆಸಕ್ತಿ ತೋರಿರುವುದರಿಂದ ಈ ಭಾಗದಲ್ಲಿ ಸುಗಂದಿ, ಏಲಕ್ಕಿ, ಸಕ್ಕರೆ ಬಾಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು ಬಿಸಿದ ಗಾಳಿಗೆ ಫಸಲು ನೆಲಕ್ಕುರುಳಿದೆ.
ಹೊಸಪೇಟೆಯಲ್ಲಿಯು ಎಂ.ಜೆ.ನಗರ, ನೂರುಹಾಸಿಗೆ ಆಸ್ಪತ್ರೆಯ ರಸ್ತೆಯಲ್ಲಿ ಮೇನ್ ಬಜಾರ್ ಬಳ್ಳಾರಿ ರಸ್ತೆಯ ಹಲವುಕಡೆಗಳಲ್ಲಿ ಮರಗಳು ಗಾಳಿಯ ಅಬ್ಬರಕ್ಕೆ ನೆಲಕ್ಕೂರುಳಿವೆ.
ಹೊಸಪೇಟೆ ನಗರದ ರಾಜೀವ್‍ನಗರ, ಬಸವೇಶ್ರ ಬಡಾವಣೆ, ಎಸ್‍ಎಲ್ ಚೌಕಿ, ರಾಮಾಟಾಕೀಸ್ ಹಿಂದುಗಡೆ, ಮೇನ್ ಬಜಾರ್‍ಗಳಲ್ಲಿ ಮರಗಳು ನೆಲಕ್ಕೂರುಳಿದ ಪರಿಣಾಮ ಸಣ್ಣಪುಟ್ಟು ತೊಂದರೆ ಸೇರಿದಂತೆ ಸ್ಪಲ್ಪ ಮಟ್ಟಿನ ಹಾನಿಯಾಗಿದೆ ಪರಿಣಾಮ ರಾತ್ರಿಯಲ್ಲಾ ವಿದ್ಯುತ್ ಸಂಪರ್ಕವಿಲ್ಲದೆ ಜನ ಪರದಾಡುವಂತಾಯಿತು. ತಕ್ಷಣವೇ ಕಾರ್ಯೋನ್ಮೂಖವಾದ ಸಿಬ್ಬಂದಿ ಸರಿಪಡಿಸುವಲ್ಲಿ ಮುಂದಾಗಿದೆ ಎಂದು ಪೌರಾಯುಕ್ತ ಚಂದ್ರಪ್ಪ ಸಂಜೆವಾಣಿಗೆ ತಿಳಿಸಿದರು. ಚರಂಡಿ ದುರಸ್ಥಿ ಸೇರಿದಂತೆ ಸಣ್ಣಪುಟ್ಟ ಕಾರ್ಯಗಳನ್ನು ಮಾಡಿ ತೊಂದರೆ ನಿವಾರಿಸಲಾಗಿದೆ ಎಂದರು.