ಮಳೆಯ ಅವಾಂತರ ಮನೆಗಳಲ್ಲಿದ್ದ ದವಸ ಧಾನ್ಯ ನಷ್ಟ


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.04  ತಾಲೂಕಿನ ರಾರಾಳು ತಾಂಡಾದಲ್ಲಿ  ಮೊನ್ನೆ  ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅಪಾರ ದವಸ ಧಾನ್ಯಗಳು  ಹಾಳಾಗಿಹೋಗಿವೆ.
 ಬುಧವಾರ  ಗೋರ್ ಸೇನ ವತಿಯಿಂದ ಎಲ್ಲಾ ಬಂಜಾರದ ಮುಖಂಡರು ಸೇರಿ ಎಲ್ಲ ಮನೆಗೆಗಳಿಗೆ ಭೇಟಿ ಮಾಡಿ ಸಮೀಕ್ಷೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆಹಾಗೂ ತಹಸೀಲ್ದಾರ್ ಗೆ, ಗ್ರಾಮ ಪಂಚಾಯಿತಿ ಪಿಡಿಒ ರತ್ನಮ್ಮ ಅವರಿಗೆ ದೂರವಾಣಿ ಮುಖಾಂತರ ಸಂಪರ್ಕ ಮಾಡಿದಾಗ ಅವರು ಸಹ ಉತ್ತಮ ಪ್ರತಿಕ್ರಿಯೆ ನೀಡಿದರು ಎಂದು ಪ್ರಕಾಶ್ ನಾಯಕ್ ತಿಳಿಸಿದ್ದಾರೆ.
ಅತಿ ಶೀಘ್ರದಲ್ಲಿ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಗೋರ್ ಸೇನಾ ಜಿಲ್ಲಾ ಉಪಾಧ್ಯಕ್ಷರಾದ ರಾಮ ನಾಯಕ್ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಲೋಕೇಶ್ ನಾಯಕ್ ಕಾನೂನು ಸಲಹೆಗಾರದ ಪ್ರಕಾಶ್ ನಾಯಕ್ ಕಾರ್ಯದರ್ಶಿಯಾದ ಲೋಲೇಶ್ ನಾಯಕ್ ಪತ್ಯ ನಾಯಕ್ ಉಮೇಶ್ ನಾಯಕ್ ರಘು ನಾಯಕ್ ಹಾಗೂ ಊರಿನ ದೈವಸ್ಥರು ಹಾಗೂ ಯುವ ಮಿತ್ರರು ಉಪಸ್ಥಿತರಿದ್ದರು

Attachments area