ಮಳೆಯ ಅಬ್ಬರದ ನಡುವೆ ದದ್ದಲ್‌ಗೆ ಭವ್ಯ ಸ್ವಾಗತ

ರಾಯಚೂರು,ಏ.೨೯- ಗ್ರಾಮೀಣ ವಿಧಾನಸಭಾ ಕ್ಷೇತ್ರದ ಯದ್ಲಾಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೆಗ್ಗಸಹಳ್ಳಿ ಗ್ರಾಮದಲ್ಲಿಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸನಗೌಡ ದದ್ದಲ್ ಅವರು ಬಿರುಸಿನ ಮತಯಾಚನೆ ಕೈಗೊಂಡಿದ್ದರು ಮಳೆಯನ್ನು ಲಕ್ಕೆಸಿದೆ ಪ್ರೀತಿ ಅಭಿಮಾನದಿಂದ ಸ್ವಾಗತ ಕೋರಿದ ಹೆಗ್ಗಸನಹಳ್ಳಿ ಗ್ರಾಮದ ಜನತೆ ನಿಮ್ಮ ಪ್ರೀತಿ ಅಭಿಮಾನಕ್ಕೆ ಚಿರಋಣಿ ಎಂದರು.ಗ್ರಾಮದ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು ಹಾಗೂ ಹೆಗ್ಗಸನಹಳ್ಳಿ ಗ್ರಾಮದ ೫೦ ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಹಿರಿಯ ಮುಖಂಡರುಗಳು ಗ್ರಾ.ಪಂ. ಸದಸ್ಯರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.