ಮಳೆಯಿಲ್ಲದೆ ಬೆಳೆ ನಾಶ ಪರಿಹಾರಕ್ಕೆ ಆಗ್ರಹ

ಕÀಲಬುರಗಿ:ಜು.7: 2023-24ನೇ ಸಾಲಿನಲ್ಲಿ ಬಿತ್ತನೆ ಮಾಡಿದಂತ ಕಬ್ಬು ಬೆಳೆಗಳು ಕರ್ನಾಟಕ ಜಿಲ್ಲೆಯಾದ್ಯಂತ ಸಕಾಲಕ್ಕೆ ಮಳೆ ಬಾರದೆ ಸಂಪೂರ್ಣ ಒಣಗಿ ಹೋಗಿದ್ದು ಪ್ರತಿ ಎಕರೆಗೆ ರೂ: 25,000/- ರಂತೆ ಬೆಳೆ ನಾಶ ಅನುಭವಿಸಿದ ರೈತರಿಗೆ ಪರಿಹಾರಧನ ಒದಗಿಸಬೇಕೆಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಮನವಿ ಮನವಿ ಸಲ್ಲಾಸಲಾತು.
ಈಗಾಗಲೇ ನಮ್ಮ ಕರ್ನಾಟಕ ರಾಜ್ಯದಲ್ಲಿ ರೈತರು ಕಬ್ಬು ಬೆಳೆ ಬಿತ್ತನಿಕೆ ಮಾಡಿ ಸುಮಾರು 3-4 ತಿಂಗಳ ಬೆಳೆಯಾಗಿದ್ದು, ಆದರೆ ಸಕಾಲಕ್ಕೆ ಮಳೆ ಬಾರದ ಕಾರಣ ಇದ್ದಂತಹ ಬಾವಿ ಬೊರವೆಲ್‍ಗಳು ಬತ್ತಿ ಹೋಗಿ ನೀರಿನಾಂಶ ಕಡಿಮೆಯಾಗಿ ಸಂಪೂರ್ಣ ಕಬ್ಬು ಬೆಳೆ ನಾಶವಾಗಿದ್ದು ಅದರಲ್ಲೂ ಅಫಜಲಪೂರ ತಾಲೂಕಿನಲ್ಲಿ ಹೆಚ್ಚಿನ ಕಬ್ಬು ಬೆಳೆ ನಾಶವಾಗಿದ್ದು ಉದಾಹರಣೆಗೆ ಅಫಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ಸಿದ್ಧರಾಮ ಶಿವಾಚಾರ್ಯರು ಶ್ರೀಮಹಾಂತೇಶ್ವರ ದೇವರು ಗುಡ್ಡದಮಠ ಇವರ ಜಮೀನು ಸ.ನಂ: 64/1 ವಿ: 17 ಎಕರೆ 13 ಗುಂಟೆಯಲ್ಲಿ ಬಿತ್ತಿದ ಸಂಪೂರ್ಣ ಕಬ್ಬು ಬೆಳೆ ಹಾಳಾಗಿರುತ್ತದೆ. ಹೀಗಾಗಿ ಕಬ್ಬು ಬೆಳೆ ಬಿತ್ತಿದಂತಹ ರೈತ ಕಂಗಾಲಾಗಿ ತುಂಬಾ ನಷ್ಟಕ್ಕೆ ಒಳಗಾಗಿ ಸಾಲದ ಸೂಲೆಗೆ ಶರಣಾಗುವ ಪರಿಸ್ಥಿತಿ ಬಂದೋದಗಿದೆ.
ಕಾರಣ ಸದರಿ ಕಬ್ಬು ಬೆಳೆಯಿಂದ ನಷ್ಟ ಅನುಭವಿಸಿದ ಕರ್ನಾಟಕ ಜಿಲ್ಲೆಯ ಎಲ್ಲಾ ರೈತರಿಗೆ ಪ್ರತಿ ಎಕರೆಗೆ ರೂ: 25,000/- ರಂತೆ ಪರಿಹಾರಧನ ಮಂಜೂರಿಸಿ ಅವರನ್ನು ಸಾಲದ ಸೂಲಿನಿಂದ ಪಾರು ಮಾಡಿಕೊಡಲು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ. ಎಂದರು.