ಮಳೆಯಿಂದ 9 ಮನೆಗೆ ಹಾನಿ

ಕೊಲ್ಹಾರ: ಜೂ.8:ತಾಲೂಕಿನ ಮಟ್ಟಿಹಾಳ ಮಳೆ ಮಾಪನ ಕೇಂದ್ರದಲ್ಲಿ 58.0 ಮೀ.ಮಿ. ಮಳೆ ದಾಖಲಾಗಿದೆ. ಇದರಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 9 ಮನೆಗಳು ಬಿದ್ದು ಹಾನಿಯಾಗಿದ್ದು. ಹಾಗೂ ಕೂಡಗಿಯ ಎ.ಟಿ.ಪಿ.ಸಿ.ಲೇಬರ ಕ್ಯಾಂಪ ಹತ್ತಿರ ನಿರ್ಮಿಸಿದ ಹಳೆಯ ಕಟ್ಟಡದ ಗೋಡೆ ಹತ್ತಿರ ಮಳೆಯಿಂದ ಆಶ್ರಯ ಪಡೆದ 9 ಕುರಿಗಳು ಸಾವನ್ನಪಿರುತ್ತವೆ. ಎಂದು ತಹಶೀಲ್ದಾರ್ ಎಸ್ ಎಸ್ ನಾಯಕಲಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.