ಮಳೆಯಿಂದ ಹಾನಿಯಾದ ಚಿಮಕೊಡದ 13 ಜನರಿಗೆ ತಲಾ 10 ಸಾ ರೂ. ಪರಿಹಾರ ವಿತರಿಸಿದ ತಹಸೀಲ್ದಾರ

ಬೀದರ್,ಜು.21: ನಿರಂತರವಾಗಿ ಸುರಿದ ಮಳೆಯಿಂದ ಹಾನಿಯಾಗಿರುವ ಬೀದರ ತಾಲೂಕಿನ ಚಿಮಕೋಡ ಗ್ರಾಮದ 13 ಜನ ಸಂತ್ರಸ್ತರಿಗೆ ಬೀದರ ತಹಸೀಲ್ದಾರರಾದ ಅಣ್ಣಾರಾವ ಪಾಟೀಲ ಅವರು ತಲಾ 10 ಸಾವಿರ ರೂ. ರಂತೆ ಚೆಕ್ ಗಳನ್ನು ವಿತರಿಸಿದರು ನಂತರ ಅವರು ಮಾತನಾಡಿ ಮುಂಬರುವ ದಿನಗಳಲ್ಲಿ ಸರಕಾರ ನೀಡುವ ನಿರ್ದೇಶನ ಮತ್ತು ಸೂಚನೆಗಳಂತೆ ಮನೆಗಳನ್ನು ನಿರ್ಮಿಸಿಕೊಡಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರಿಕ್ಷಕ ರಾಮೇಶ್ವರ, ಪಿಡಿಓ ಶ್ರೀನಿವಾಸ ದೇಶಪಾಂಡೆ ವಿ.ಎ. ಲಕ್ಷ್ಮಿರಡ್ಡಿ, ಚಿಮಕೋಡ ಗ್ರಾಮ ಪಂಚಾಯತ ಅಧ್ಯಕ್ಷ ನಾಗಶೆಟ್ಟಿ ಬಿರಾದಾರ, ಸದಸ್ಯರಾದ ಕಾಮಶೆಟ್ಟಿ ಶಿರಗೊಂಡೆ, ಎಸ್.ಡಿ. ಎಂ.ಸಿ. ಅಧ್ಯಕ್ಷ ಶ್ರೀಕಾಂತ ಕಂದಗೂಳೆ, ಭಾಗ್ಯವಂತಿ ಮೊಟಾರ ಡ್ರೈವಿಂಗ್ ಸ್ಕೂಲ್ ನ ಪ್ರಾಶುಂಪಾಲರಾದ ಶಿವರಾಜ ಜಮಾದಾರ ಖಾಜಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.