ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಶಾಸಕರ ಭೇಟಿ

ಕಲಘಟಗಿ,ನ.28: ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಹಾಗೂ ಬಿದ್ದ ಮನೆಗಳ ಸ್ಥಳಕ್ಕೆ ಶಾಸಕ ಸಿ.ಎಂ.ನಿಂಬಣ್ಣವರ ಭೇಟಿ ನೀಡಿದರು.
ತಾಲೂಕಿನ ತುಮರಿಕೊಪ್ಪ, ದಾಸ್ತಿಕೊಪ್ಪ, ಹಾಗೂ ಮಲಕನಕೊಪ್ಪ ಗ್ರಾಮಗಳಿಗೆ ತೆರಳಿ ಬಿದ್ದ ಮನೆಗಳ ವಿವರ ಹಾಗೂ ರೈತರ ಹೊಲದಲ್ಲಿ ಹಾನಿಗಿಡಾದ ಭತ್ತದ ಬೆಳೆಗೆ ಕೂಡಲೇ ಸಮೀಕ್ಷೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮನೆ ಹಾನಿಯಾದ ಕುಟುಂಬಗಳಿಗೆ ಸರಕಾರದಿಂದ ಆದಷ್ಟು ಬೇಗ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು, ಯಾರು ಧೈರ್ಯ ಕಳೆದುಕೊಳ್ಳಬಾರದು ಎಂದು ಗ್ರಾಮಸ್ಥರಿಗೆ ವಿನಂತಿಸಿದರು.
ಕೃಷಿ ಪ್ರಧಾನವಾದ ಈ ಮತಕ್ಷೇತ್ರದಲ್ಲಿ ಹೆಚ್ಚಾಗಿ ಭತ್ತ, ಗೋವಿನ ಜೋಳ, ಹತ್ತಿ, ತರಕಾರಿಗಳು ಬೆಳೆಯುತ್ತಿದ್ದು ಅವು ಅತಿಯಾದ ಮಳೆಯಿಂದ ಹಾನಿಗಿಡಾಗಿವೆ ಎಂದರು.
ತಾಲೂಕಾ ದಂಡಾಧಿಕಾರಿ ಯಲ್ಲಪ್ಪ ಗೋಣೆಣ್ಣವರ, ಸಹಾಯಕ ಕೃಷಿ ನಿರ್ದೇಶಕ ಎನ್.ಎಪ್ ಕಟ್ಟೆಗೌಡ್ರ ಇದ್ದರು.