ಸಂಜೆವಾಣಿ ವಾರ್ತೆ
ಸಂಡೂರು : ಜೂನ್: 11: ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ರೈತರು ಮಳೆಗಾಗಿ ಕಾದು ಕುಳಿತ್ತಿದ್ದರು, ಅಲ್ಲದೆ ಮಳೆ ಬೇಕೆಂದು ಅಮ್ಮನ ಪೂಜೆಯನ್ನು ಸಹ ನೆರವೇರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ ಪರಿಣಾಮವಾಗಿ ಇಂದು 4 ಗಂಟೆಯಿಂದ 5.30ರ ವರಗೆ ಅರ್ಭಟಿಸದ ಮಳೆ ಮನೆಗಳ ಮಾಳಿಗೆ ನೀರು ದುಮ್ಮಿಕ್ಕಿದರೆ, ರಸ್ತೆಯಲ್ಲಿಯ ಚರಂಡಿಗಳು ತುಂಬಿ ಅಲ್ಲಲ್ಲಿ ಚರಂಡಿನೀರು ಸಮೇತ ರಭಸದಿಂದ ಹರಿಯಿತು.
ಮಳೆ ಬರುವಿಕೆಗಾಗಿ ಕಾದ ಕುಳಿತ ರೈತ ರೋಹಿಣಿ ಮಳೆಗಾಗಿ ಕಾದಿದ್ದ ಅದರೆ ಮಳೆ ಬರದ ಹಿನ್ನಲೆಯಲ್ಲಿ ಜೋಳ ಬಿತ್ತನೆ ಇಲ್ಲವಾಯಿತು, ಅಲ್ಲದೆ ಈಗ ಮಳೆ ಬಂದ ಪರಿಣಾಮ ಮೆಕ್ಕೆ ಜೋಳಗಳನ್ನು ಬಿತ್ತಲು ಪೂರ್ಣ ಪ್ರಮಾಣದಲ್ಲಿ ಸಿದ್ದಗೊಂಡಿದ್ದಾರೆ, ತಕ್ಷಣ ಕೃಷಿ ಮಳಿಗೆಗಳಲ್ಲಿ ಬೀಜ, ಗೊಬ್ಬರಕ್ಕಾಗಿ ರೈತರು ಭಾನುವಾರ ಬೆಳಿಗ್ಗೆ ಸಾಲು ಗಟ್ಟಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ, ಕಾರಣ ಮಳೆಯಿಂದ ಭೂಮಿ ತಂಪಾಗಿದ್ದು ಬಿತ್ತನೆಗೆ ಹದವಾಗಿದೆ ಎನ್ನಬಹುದು, ಅದರೂ ಅತಿಯಾದ ಬಿಸಿಲಿನ ತಾಪದಿಂದ ರೈತ ತತ್ತರಿಸಿದ್ದರ ಜೊತೆಗೆ ದನಕರುಗಳಿಗೆ ಮೇವಿನ ಸಮಸ್ಯೆಯೂ ಸಹ ಉಂಟಾಗಿದೆ, ಕಾರಣ ಮೆಯಲು ಒಣ ಮೇವು ಇಲ್ಲವಾಗಿದೆ, ಹಸಿ ಮೇವು ಬರಲು ಮಳೆ ಇಲ್ಲವಾಗಿದೆ, ಅದ್ದರಿಂದ ಇಂದು ಸಂಜೆ ಬಿದ್ದ ಮಳೆಯಿಂದ ಒಂದು ಕಡೆ ದನಕರುಗಳಿಗೆ ನೀರು, ಮೇವು ದೊರೆಯುವಂತಾದರೆ, ರೈತರಿಗೆ ಬಹು ಖುಷಿಯಿಂದ ಬಿತ್ತನೆ ಪ್ರಾರಂಭಿಸುತ್ತಾನೆ.
ಮಳೆ ರೈತರಿಗೆ ಸಂತಸವನ್ನು ಉಂಟುಮಾಡಿದರೆ ಮಳೆಯ ಆರ್ಭಟ ಮತ್ತು ಗಾಳಿಯಿಂದ ಅಲ್ಲಲ್ಲಿ ಸಮಸ್ಯೆಗಳು ಸಹ ಉಂಟಾಗಿವೆ, ಇನ್ನೂ ಗಣಿ ಪ್ರದೇಶಗಳಲ್ಲಿ ನೀರು ದುಮ್ಮಿಕ್ಕಿ ಹರಿಯುವ ಮೂಲಕ ಸಂಚಾರಕ್ಕೆ ಸಂಚಕಾರ ತಂದಿರುವುದಂತೂ ನಿಜ, ಅದರೂ ಮಳೆ ನಿಂತಮೇಲೆ ನಿಧಾನವಾಗಿ ತಮ್ಮ ಸಂಚಾರ ಪ್ರಾರಂಭಿಸಿದ್ದು ಕಂಡುಬಂದಿತು.
ಒಟ್ಟಾರೆ ಮಳೆ ರೈತನಿಗೆ ಖುಷಿ ಉಂಟುಮಾಡಿದರೆ, ಬಿಸಿಲಿನಿಂದ ತತ್ತರಿಸಿದ ಜನತೆಗೆ ತಂಪೆರದಂತಾಗಿದೆ, ದನಕರುಗಳಿಗೆ ಕುಡಿಯುವ ನೀರು, ಮೇವು ಬರಲು ಸಹಾಯಕವಾಗಿದೆ.