ಮಳೆಯಿಂದ ರೈತರ ಬೆಳೆಹಾನಿ : ಪರಿಹಾರಕ್ಕೆ ಒತ್ತಾಯ


ಸಂಜೆವಾಣಿ ವಾರ್ತೆ
ಸಂಡೂರು:ಸೆ: 8: ನಿರಂತರ ಮಳೆಯಿಂದಾಗಿ ರೈತರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ, ಲಕ್ಷಾಂತರ ರೂಪಾಯಿ ಸಾಲಾಮಾಡಿ, ಬೀಜಗೊಬ್ಬರ ತಂದು ಬಿತ್ತಿದೆ ಭತ್ತದ ಬೆಳೆ ಪೂರ್ಣಪ್ರಮಾಣದಲ್ಲಿ ನೀರುಪಾಲಾಗಿದೆ. ಹತ್ತಿ ನೆಲಹತ್ತಿಹೋಗಿದೆ. ಅತ್ತ ಬೆಳೆಯೂ ಇಲ್ಲ ಸಾಲದ ಭಾದೆ ಎರಡೂ ನೋವಿನಿಂದ ರೈತರು ತತ್ತರಿಸಿದ್ದು ತಕ್ಷಣ ಕೃಷಿ ಭೂಮಿಗಳಿಗೆ ಭೇಟಿನೀಡಿ ಸರ್ವೇ ಮಾಡುವ ಮೂಲಕ ಪರಿಹಾರ ಕೊಡುವ ಮೂಲಕ ಅವರನ್ನು ಸಾವಿನ ದವಡೆಯಿಂದ ರಕ್ಷಿಸಬೇಕು ಎಂದು ಜೆ.ಡಿ.ಎಸ್. ಅಧ್ಯಕ್ಷ ಎನ್.ಸೋಮಪ್ಪ ಒತ್ತಾಯಿಸಿದರು.
ಅವರು ಇಂದು ತಾಲೂಕು ಜೆ.ಡಿ.ಎಸ್. ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ರೈತರ ಸಂಕಷ್ಟ ಪರಿಹರಿಸಿ ಕಾರ್ಯಕ್ರಮದಲ್ಲಿ ಸಭೆಯನ್ನು ಸೇರಿ ತಹಶೀಲ್ದಾರ್ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಾತನಾಡಿ ಸಂಡೂರು ಕ್ಷೇತ್ರದಾದ್ಯಂತ ವಿಪರೀತ ಬಿಟ್ಟು ಬಿಡದ ಮಳೆಯಿಂದು ಕುರೇಕುಪ್ಪ ಭಾಗದಲ್ಲಿಯ ಗದ್ದೆಗಳು ಜಲಾವೃತ್ತವಾಗಿ ಲಕ್ಷಾಂತರ ನಷ್ಟವಾದರೆ, ಚೋರನೂರು, ಬೊಮ್ಮಘಟ್ಟ, ತಾರಾನಗರ, ಇತರ ಭಾಗಗಳಲ್ಲಿ ಬಿತ್ತಿದ ಬೆಳೆಗಳು ನೀರಿನಿಂದ ಕೊಳೆತು ಹೋಗಿವೆ. ಭುಜಂಗನಗರ, ದೌಲತ್‍ಪುರ ಈ ಬಾಗದಲ್ಲಿ ಗಣಿ ಪ್ರದೇಶದಿಂದ ದುಮ್ಮಿಕ್ಕುವ ನೀರಿನಿಂದ ಮೆಕ್ಕೆ ಜೋಳ ಕೊಚ್ಚಿಕೊಂಡು ಹೋಗಿವೆ ಇದರಿಂದ ಇಡೀ ತಾಲೂಕಿನಾದ್ಯಂತ ಅದರಲ್ಲು ಕುರೇಕುಪ್ಪ ಭಾಗದಲ್ಲಿ ಪೂರ್ಣ ಪ್ರಮಾಣದ ಬೆಳೆಗಳು ಜಲಾವೃತ್ತವಾಗಿದ್ದು ರೈತರು ದಿಕ್ಕು ತೋಚದಂತಾಗಿದ್ದಾರೆ. ಸಾಲಗಾರರ ಒತ್ತಡ ಪ್ರಾರಂಭವಾಗುವ ಮೊದಲೆ, ಅವರ ಸೂರುಗಳು ಬಿದ್ದು ಬೀದಿಗೆ ಬರುವ ಮೊದಲೇ ಅಧಿಕಾರಿಗಳು ಅವರ ಭೂಮಿಗಳಿಗೆ ಭೇಟಿ ನೀಡಿ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಬೇಕು ಇಲ್ಲವಾದಲ್ಲಿ ಇಡೀ ತಾಲೂಕಿನಾದ್ಯಂತ ಎಲ್ಲಾ ರೈತರು ಸೇರಿ ಕಛೇರಿಯ ಮುಂಭಾಗದಲ್ಲಿ ಪರಿಹಾರಕ್ಕಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಅದಕ್ಕೆ ಜೆ.ಡಿ.ಎಸ್. ಪಕ್ಷ ಸದಾ ರೈತರ ಪರವಾಗಿ ಅವರ ರಕ್ಷಣೆಗಾಗಿ ಕಂಕಣ ಬದ್ಧವಾಗಿದೆ ಎಂದು ತಿಳಿಸಿ ಶಿರಸ್ತೇದಾರ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೊನ್ನೂರಸ್ವಾಮಿ, ಜೆ.ಡಿ.ಎಸ್. ಉಪಾಧ್ಯಕ್ಷೆ ಕಮತೂರು ಮಲ್ಲೇಶ್, ಶಫಿ, ಹೊಸಗೇರಪ್ಪ. ಎನ್.ಚಿನ್ನಾಪುರಿ, ಪುರಸಭೆಯ ಸದಸ್ಯರಾಧ ಲಕ್ಷ್ಮೀಹೊಸಗೇರಪ್ಪ, ಕೆ.ಕೆ.ಮಹೇಶ್, ಗಣಿಕಾರ್ಮಿಕರ ಸಂಘದ ಅಧ್ಯಕ ಗೋಪಿನಾಥ, ಎ.ಯಲ್ಲಪ್ಪ, ಪೀರಾಸಾಬ್, ಶಬ್ಬೀರ್, ಅಂಜಿನಪ್ಪ ಇತರ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.
ಪಟ್ಟಣದ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರರ ಅವರಿಗೆ ಜೆ.ಡಿ.ಎಸ್. ಅಧ್ಯಕ್ಷ ಎನ್.ಸೋಮಪ್ಪ ನೇತೃತ್ವದಲ್ಲಿ ರೈತರಿ ಮಳೆಯಿಂದ ಉಂಟಾದ ನಷ್ಟಕ್ಕೆ ತಕ್ಷಣ ಪರಿಹಾರ ನೀಡುವ ಮೂಲಕ ಅವರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.