ಮಳೆಯಿಂದ ಯಾವುದೇ ಜೀವ ಹಾನಿ ಇಲ್ಲ

ಆಳಂದ:ಸೆ.25:ಬುಧವಾರ ರಾತ್ರಿ ಸುರಿದ ಅಪಾರ ಪ್ರಮಾಣದ ಅಂದರೆ ತಾಲ್ಲೂಕಿನಲ್ಲಿ ಒಟ್ಟು 348 ಮೀ.ಮೀ ಮಳೆಯಾಗಿದ್ದು. ಯಾವುದೇ ಜೀಓ ಹಾನಿ ಆಗಿಲ್ಲ ಎಂದು ತಹಶೀಲ್ದಾರ ಯಲ್ಲಪ್ಪ ಸುಬೇದಾ ಅವರು ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಪಟ್ಟಣದಲ್ಲಿ ತಹಶೀಲ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 10 ಮನೆಗಳು ಕುಸಿದ್ದು. ಈಗಾಗಲೇ ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳ ಜಂಟಿ ಸಮೀಕ್ಷೆ ಕಾರ್ಯ ಚರಣೆಯಲ್ಲಿ ಇದೆ. ಸಮೀಕ್ಷೆ ಮುಗಿದ ನಂತೆ ಮಾಹಿತಿ ತಿಳಿಸಲಾಗುವುದು ಹಾಗೂ ದೇವತಂಗಿ ಗ್ರಾಮದ 2 ಎಮ್ಮೆಗಳ ಸಾವು ಆಗಿರುವ ಘಟನೆ ನಡೆದಿದೆ ಮತ್ತು ಪಡಸಾವಳಿ ಗ್ರಾಮದ ರೈತ ತಿಪ್ಪಣ್ಣಾ ಹೋಲದಲ್ಲಿ ಕಬ್ಬು ಸಂಪೂರ್ಣ ನಾಶವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾರ್ಚ 2019-20 ರಿಂದ ಇಲ್ಲಿಯವರೆಗೆ ಕೋವಿಡ-19ರ ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದ ಸಂಬಂಧಿಸಿಕರಿಗೆ 1 ಲಕ್ಷ ರೂಪಾಯಿ ಸರಕಾರ ಸಹಾಯ ಧನ ನೀಡಲು ತೀರ್ಮಾನಿಸಿದ್ದು. ಮರಣ ಹೊಂದಿದ ಕುಟುಂಬದವರು ಮೂಲಕ ದಾಖಲಾತಿಗಳೊಂದಿಗೆ ತಹಶೀಲ ಕಚೇರಿಗೆ ಅರ್ಜಿ ಸಲ್ಲಿಸಬೇಕೆಂದು ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 70 ಜನ ಕೊರೊನಾಕ್ಕೆ ಬಲಿಯಾಗಿದ್ದು. ಅದರಲ್ಲಿ 30 ಜನ ಮಹಿಳೆಯರು, 40 ಜನ ಪುರುಷರು ನೋಂದಣಿಯಾಗಿದ್ದು. ಕಂದಾಯ ಗ್ರಾಮಗಳ ವ್ಯಾಪ್ತಿಯ ಪ್ರಕಾರ ಆಳಂದ 29, ನಿಂಬರ್ಗಾ 13, ಖಜೂರಿ 09, ಮಾದನ ಹಿಪ್ಪರಗಾ 10, ನರೋಣಾ 09 ಮರಣ ಹೊಂದಿದ್ದು. ಸಹಾಯ ಧನಕ್ಕಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅರ್ಜಿ ಸ್ವೀಕರಿಸಿಲಾಗುತ್ತಿದ್ದು. ಮೃತ ಪಟ್ಟ ವ್ಯಕ್ತಿಗೆ ಸಂಬಂಧಿಕರು ಅರ್ಜಿ ಸಲ್ಲಿಸತ್ಕದ್ದು. ಮೃತನ ಮರಣ ಪ್ರಮಾಣ ಪತ್ರ ಆಧಾರ ಕಾರ್ಡ, ಬಿಪಿಎಲ್ ಪಡಿತರ ಚೀಟಿ ಹಾಗೂ ಅರ್ಜಿ ಸಲ್ಲಿಸುವರ ಆಧಾರ ಕಾರ್ಡ , ಬ್ಯಾಂಕ ಪಾಸಬುಕ್ ಹಾಗೂಸ ಸ್ವಯಂ ಘೋಷಿತ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಅವರು ಹೇಳಿದ್ದಾರೆ.

ಮಳೆ ಪ್ರಮಾಣ :

ತಾಲ್ಲೂಕಿನ 07 ಮಳೆ ಮಾಪನಗಳಲ್ಲಿ ಮಳೆ ಪ್ರಮಾಣ ಆಳಂದ 30, ನಿಂಬರ್ಗಾ 57, ಕೋರಳ್ಳಿ 83.20, ಮಾದನ ಹಿಪ್ಪರಗಾ 251, ಸರಸಂಬಾ 42, ನರೋಣಾ 21, ಖಜೂರಿ 43 ಮೀ.ಮೀ ಸುರಿದಿದೆ ಎಂದು ತಿಳಿಸಿದ್ದಾರೆ.