ಮಳೆಯಿಂದ ಮನೆ ಹಾನಿ ಸಂತ್ರಸ್ತರಿಗೆ ಚೆಕ್ ವಿತರಣೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಆ.6: ಸಂತ್ರಸ್ತರು ಧೈರ್ಯ ” ಕಳೆದುಕೊಳ್ಳಬಾರದು . ಈಗ ವಿತರಿಸಿರುವುದು ತಾತ್ಕಾಲಿಕ ಪರಿಹಾರ . ಸರ್ಕಾರದಿಂದ ಇನ್ನೂ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಹೇಳಿದರು . ಹಳ್ಳಿಖೇಡ ( ಬಿ ) ಪಟ್ಟಣದಲ್ಲಿ ಭಾರಿ ಮಳೆಯಿಂದ ಮನೆ ಹಾನಿಗೊಳಗಾದ ಸಂತ್ರಸ್ತರ ಮನೆಗೆ ಶುಕ್ರವಾರ ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ 10 ಸಾವಿರ ರೂ . ತಾತ್ಕಾಲಿಕ ಪರಿಹಾರ ಧನ ಚೆಕ್ ವಿತರಿಸಿದ ಅವರು , ಶಾಸಕ ರಾಜಶೇಖರ ಪಾಟೀಲ್ ಅವರ ಸೂಚನೆಯಂತೆ ಮಾಜಿ ಸಚಿವ ದಿ.ಬಸವರಾಜ ಪಾಟೀಲ್ ಫೌಂಡೇಷನ್ ವತಿಯಿಂದ ಕಂದಾಯ ಇಲಾಖೆಯಲ್ಲಿ
ನೋಂದಾಯಿತ ಪ್ರತಿ ಸಂತ್ರಸ್ತರಿಗೆ ಹಾನಿಗೊಳಗಾದ ಮನೆಯ ಸ್ಥಿತಿಗೆ ಅನುಗುಣವಾಗಿ ಹತ್ತು ಅಥವಾ ಐದು ಚೀಲ ಗುಣಮಟ್ಟದ ಸಿಮೆಂಟ್ ಕಲ್ಪಿಸುವ ಭರವಸೆ ನೀಡಿದರು . ಜಗದೇವಿ , ಬಸವರಾಜ ಹಾಗೂ ವೈಜಯಂತಿಮಾಲಾ ಗೋಪಾಲರಾವ ಅವರಿಗೆ ಚೆಕ್ ವಿತರಿಸಿದರು . ತಹಸೀಲ್ದಾರ್ ಪ್ರದೀಪಕುಮಾರ , ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ , ಮಾಜಿ ಅಧ್ಯಕ್ಷ ಮಹಾಂತಯ್ಯ , ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ , ಪ್ರಮುಖರಾದ ಕೇಶವರಾವ ತಳಘಟಕ , ಯೂಸುಫ್ ಸೌದಾಗರ್ , ಗೌಸ್ ರಾಜಾಭಾಯಿ , ಆರಿಫ್ ಬಾವಗಿ , ಹಸನ್ , ರಾಜು ಶಂಕೆ , ವಿಜಯಕುಮಾರ ಜಗದಾಳೆ , ಸಂದೀಪ ಪ್ರಭಾ , ಸಾಜಿದ್ ಪಟೇಲ್ , ಗೌರೀಶ ಸಿಂದೋಲ , ವೀರಪ್ಪ ಇತರರಿದ್ದರು .