ಮಳೆಯಿಂದ ಮನೆ ಹಾನಿ ಪರಿಹಾರ ಚೆಕ್ ವಿತರಣೆ

(ಸಂಜೆವಾಣಿ ವಾರ್ತೆ)
ಹುಮನಾಬಾದ :ಜು.31:ತಾಲೂಕಿನ ಕಳೆದ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ದಾಗಿ ಹಾನಿಗೊಳಗಾದ ಮನೆ ಕುಟುಂಬಸ್ಥರಿಗೆ ಸರ್ಕಾರದಿಂದ ಸಿಗುವ ಪರಿಹಾರ ಧನ ಚೆಕ್ಕನ್ನು ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಶನಿವಾರ ವಿತರಿಸಿದರು ಹಳ್ಳಿಖೇಡ್ ಕೆ, ಮುಸ್ತಾಪೂರ, ದುಬಲಗುಂಡಿ ಗ್ರಾಮದ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಧನದ ಚೆಕ್ ನೀಡಿದರು
ತಹಶಿಲ್ದಾರರ ಡಾ. ಪ್ರದೀಪಕುಮಾರ ಹಿರೇಮಠ, ಡಾ.ಸಿದ್ದು ಪಾಟೀಲ,ಮಲ್ಲಿಕಾರ್ಜುನ ಕುಂಬಾರ, ಪ್ರಭಾಕರ ನಗರಾಳೆ, ಗುಂಡು ರಡ್ಡಿ, ಪ್ರದೀಪ್ ವಾತಡೆ, ಸುನೀಲ್ ಪಾಟೀಲ್, ನಾಗಭೂಷಣ ಸಂಗಮಕರ್, ವೈಜಪ್ಪ ಪಾಟೀಲ್, ಗೀರಿಶ್ ತುಂಬಾ, ರಾಚಣ್ಣ ಸೌಹುಕಾರ್, ಉಪಸ್ಥಿತರಿದ್ದರು.