(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು.23: ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ನಿರಂತರ ಜಿಟಿ ಜಿಟಿ ಮಳೆಯಿಂದಾಗಿ ಅಲ್ಲಲ್ಲಿ ಮನೆಗಳು ಭಾಗಶ: ಇಲ್ಲವೇ ಸಂಪೂರ್ಣ ಕುಸಿಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿವೆ.
ಹರ್ಲಾಪುರ ಗ್ರಾಮದ ಗೌರಿ ಗುಡಿ ಓಣಿಯ ಅಶೋಕ್ ಪಾಟೀಲ್ ಎಂಬವರಿಗೆ ಸೇರಿದ ಮನೆಯೊಂದು ನಿನ್ನೆ ಮುಂಜಾನೆ ಕುಸಿದ ಬಿದ್ದ ಬಗ್ಗೆ ವರದಿಯಾಗಿದೆ ಆದರೆ ಇದುವರೆಗೂ ಕಂದಾಯ ಇಲಾಖೆಯ ಯಾವುದೇ ಅಧಿಕಾರಿಗಳು ಬಿದ್ದಿರುವ ಮನೆಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಲಭ್ಯರಾಗುತ್ತಿಲ್ಲ.