ಮಳೆಯಿಂದ ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

ಜೇವರ್ಗಿ :ಸೆ.10:ತಾಲೂಕಿನ ಆಂದೋಲಾ ಗ್ರಾಮ ಪಂಚಾಯಿತಿಯಲ್ಲಿನ ಮೂಲ ಸೌಕರ್ಯ ಕಲ್ಪಿಸಬೇಕು, ಮಂಜೂರಿಯಾದ ಬಸವ ವಸತಿ ಯೋಜನೆ, ಹಾಗೂ ಡಾ.ಬಿ.ಅಂಬೇಡ್ಕರ್ ವಸತಿ ಯೋಜನೆ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ, ಇತ್ತಿಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ದಿನಾಂಕ,15-09-2022 ರಂದು ಗುರುವಾರ ಆಂದೋಲಾ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರೊಂದಿಗೆ, ದಲಿತ ಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ, ಎಂಬ ಮನವಿ ಪತ್ರವನ್ನು ಇಂದು ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ,ಮಹೇಬೂಬ ಸಿಂದಗಿಕರ್, ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಶ್ರೀ ಶಿವಲಿಂಗ ಚಲಗೇರಿ, ದಲಿತ ಸೇನೆ ಗುಲ್ಬರ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೋಲಾ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬೋಳಣಿ,ಕಪೀಲ್ ವಾಲಿ, ಯುವ ಘಟಕದ ಜಿಲ್ಲಾಧ್ಯಕ್ಷರಾದ ಆಶ್ರಫ್ ಅಲಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಮೋಹನ್ ಚಿನ್ನ, ಗುಲ್ಬರ್ಗ ತಾಲೂಕು ಅಧ್ಯಕ್ಷರಾದ ರಾಜು ಲೇಂಗಟಿ, ಗುಲ್ಬರ್ಗ ನಗರ ಘಟಕದ ಅಧ್ಯಕ್ಷರಾದ ಗುರು ಮಾಳಗೆ, ಜೇವರ್ಗಿ ತಾಲೂಕು ಅಧ್ಯಕ್ಷರಾದ ಶಿವಶರಣ ಮಂದೇವಾಲ, ಯುವ ಘಟಕದ ತಾಲೂಕು ಅಧ್ಯಕ್ಷರಾದ ಖಮರ್ ಪೀರಾಸಾಬ, ನೇತೃತ್ವದಲ್ಲಿ ಜೇವರ್ಗಿ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು,