ಮಳೆಯಿಂದ ಬೆಳೆಹಾನಿ

ಸೇಡಂ: ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಬೆಣ್ಣೆತೊರಾ ಹಿನ್ನೀರಿನಿಂದ ಬೀರನಳ್ಳಿ ಗ್ರಾಮದ ರೈತ ಗುರುಸ್ವಾಮಿ ಕಲ್ಮಠ ಅವರ ೩ ಎಕರೆ ಗುಲಾಬಿ ತೋಟ, ಕಬ್ಬು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಹಾನಿಯಾಗಿದೆ.